18 : 1
ٱلْحَمْدُ لِلَّهِ ٱلَّذِىٓ أَنزَلَ عَلَىٰ عَبْدِهِ ٱلْكِتَـٰبَ وَلَمْ يَجْعَل لَّهُۥ عِوَجَا ۜ
ತನ್ನ ದಾಸನ ಮೇಲೆ ಕುರ್‌ಆನ್ ಅವತೀರ್ಣಗೊಳಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅವನು ಅದರಲ್ಲಿ ಯಾವುದೇ ಕುಂದುಕೊರತೆಗಳನ್ನು ಮಾಡಿಲ್ಲ.
18 : 2
قَيِّمًا لِّيُنذِرَ بَأْسًا شَدِيدًا مِّن لَّدُنْهُ وَيُبَشِّرَ ٱلْمُؤْمِنِينَ ٱلَّذِينَ يَعْمَلُونَ ٱلصَّـٰلِحَـٰتِ أَنَّ لَهُمْ أَجْرًا حَسَنًا
ಅವನು ಅದನ್ನು ಸರಿಯಾದ ರೀತಿಯಲ್ಲಿಟ್ಟಿದ್ದಾನೆ. ಅವನ ಕಡೆಯ ಕಠೋರ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲು ಮತ್ತು ಸತ್ಕರ್ಮವೆಸಗುವ ಸತ್ಯವಿಶ್ವಾಸಿಗಳಿಗೆ ಅತ್ಯುತ್ತಮ ಪ್ರತಿಫಲವಿದೆಯೆಂಬ ಸುವಾರ್ತೆಯನ್ನು ತಿಳಿಸಲು.
18 : 3
مَّـٰكِثِينَ فِيهِ أَبَدًا
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
18 : 4
وَيُنذِرَ ٱلَّذِينَ قَالُوا۟ ٱتَّخَذَ ٱللَّهُ وَلَدًا
ಮತ್ತು “ಅಲ್ಲಾಹನಿಗೆ ಮಕ್ಕಳಿದ್ದಾರೆ” ಎಂದು ಹೇಳುವವರಿಗೆ ಮುನ್ನೆಚ್ಚರಿಕೆ ನೀಡಲು.
18 : 5
مَّا لَهُم بِهِۦ مِنْ عِلْمٍ وَلَا لِـَٔابَآئِهِمْ ۚ كَبُرَتْ كَلِمَةً تَخْرُجُ مِنْ أَفْوَٰهِهِمْ ۚ إِن يَقُولُونَ إِلَّا كَذِبًا
ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ; ಅವರ ಪೂರ್ವಜರಿಗೂ ಇಲ್ಲ. ಅವರ ಬಾಯಿಯಿಂದ ಹೊರಬರುವ ಆ ಮಾತು ಬಹಳ ಗಂಭೀರವಾಗಿದೆ. ಅವರು ಸುಳ್ಳನ್ನು ಮಾತ್ರ ಹೇಳುತ್ತಿದ್ದಾರೆ.
18 : 6
فَلَعَلَّكَ بَـٰخِعٌ نَّفْسَكَ عَلَىٰٓ ءَاثَـٰرِهِمْ إِن لَّمْ يُؤْمِنُوا۟ بِهَـٰذَا ٱلْحَدِيثِ أَسَفًا
ಅವರು ಈ ಸಂದೇಶದಲ್ಲಿ ವಿಶ್ವಾಸವಿಡದಿದ್ದರೆ, ಆ ನೋವಿನಿಂದ ನೀವು ನಿಮ್ಮ ಜೀವಕ್ಕೆ ಕುತ್ತು ತರಲೂಬಹುದು.[1]
18 : 7
إِنَّا جَعَلْنَا مَا عَلَى ٱلْأَرْضِ زِينَةً لَّهَا لِنَبْلُوَهُمْ أَيُّهُمْ أَحْسَنُ عَمَلًا
ನಿಶ್ಚಯವಾಗಿಯೂ ನಾವು ಭೂಮಿಯ ಮೇಲಿರುವುದನ್ನು ಅದಕ್ಕೊಂದು ಅಲಂಕಾರವಾಗಿ ಮಾಡಿದ್ದೇವೆ. ಮನುಷ್ಯರಲ್ಲಿ ಅತ್ಯುತ್ತಮ ಕರ್ಮಗಳನ್ನು ಮಾಡುವವರು ಯಾರೆಂದು ಪರೀಕ್ಷಿಸುವುದಕ್ಕಾಗಿ.
18 : 8
وَإِنَّا لَجَـٰعِلُونَ مَا عَلَيْهَا صَعِيدًا جُرُزًا
ನಿಶ್ಚಯವಾಗಿಯೂ ನಾವು ಅದರ (ಭೂಮಿಯ) ಮೇಲಿರುವುದನ್ನು ಸಮತಟ್ಟಾದ ಬಯಲು ಪ್ರದೇಶವಾಗಿ ಪರಿವರ್ತಿಸುವೆವು.
18 : 9
أَمْ حَسِبْتَ أَنَّ أَصْحَـٰبَ ٱلْكَهْفِ وَٱلرَّقِيمِ كَانُوا۟ مِنْ ءَايَـٰتِنَا عَجَبًا
ಗುಹೆ ಮತ್ತು ಶಿಲಾಶಾಸನದ ಜನರು ನಮ್ಮ ದೃಷ್ಟಾಂತಗಳಲ್ಲಿ ಅತಿದೊಡ್ಡ ಅದ್ಭುತವಾಗಿದ್ದಾರೆಂದು ನೀವು ಭಾವಿಸಿದ್ದೀರಾ?
18 : 10
إِذْ أَوَى ٱلْفِتْيَةُ إِلَى ٱلْكَهْفِ فَقَالُوا۟ رَبَّنَآ ءَاتِنَا مِن لَّدُنكَ رَحْمَةً وَهَيِّئْ لَنَا مِنْ أَمْرِنَا رَشَدًا
ಆ ಯುವಕರು ಗುಹೆಯಲ್ಲಿ ಆಶ್ರಯ ಪಡೆದ ಸಂದರ್ಭ.[1] ಅವರು ಹೇಳಿದರು: “ನಮ್ಮ ಪರಿಪಾಲಕನೇ! ನಮಗೆ ನಿನ್ನ ಕಡೆಯ ದಯೆಯನ್ನು ನೀಡಿ ಆಶೀರ್ವದಿಸು ಮತ್ತು ನಮ್ಮ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ನಮಗೆ ಅನುಕೂಲ ಮಾಡಿಕೊಡು.”
18 : 11
فَضَرَبْنَا عَلَىٰٓ ءَاذَانِهِمْ فِى ٱلْكَهْفِ سِنِينَ عَدَدًا
ಹೀಗೆ ನಾವು ಅನೇಕ ವರ್ಷಗಳ ಕಾಲ ಆ ಗುಹೆಯಲ್ಲಿ ಅವರ ಕಿವಿಗಳನ್ನು ಮುಚ್ಚಿದೆವು (ಅವರನ್ನು ನಿದ್ದೆಗೆ ಶರಣಾಗಿಸಿದೆವು).
18 : 12
ثُمَّ بَعَثْنَـٰهُمْ لِنَعْلَمَ أَىُّ ٱلْحِزْبَيْنِ أَحْصَىٰ لِمَا لَبِثُوٓا۟ أَمَدًا
ನಂತರ ನಾವು ಅವರನ್ನು ಎಬ್ಬಿಸಿದೆವು. ಅವರು ಗುಹೆಯಲ್ಲಿ ಎಷ್ಟು ವರ್ಷ ಕಳೆದಿದ್ದರೆಂದು ಆ ಎರಡು ಗುಂಪುಗಳಲ್ಲಿ ಖಚಿತವಾಗಿ ಲೆಕ್ಕ ಮಾಡಿದವರು ಯಾರೆಂದು ತಿಳಿಯುವುದಕ್ಕಾಗಿ.
18 : 13
نَّحْنُ نَقُصُّ عَلَيْكَ نَبَأَهُم بِٱلْحَقِّ ۚ إِنَّهُمْ فِتْيَةٌ ءَامَنُوا۟ بِرَبِّهِمْ وَزِدْنَـٰهُمْ هُدًى
ನಾವು ನಿಮಗೆ ಅವರ ನೈಜ ಸಮಾಚಾರವನ್ನು ವಿವರಿಸುವೆವು. ಅವರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟ ಕೆಲವು ಯುವಕರಾಗಿದ್ದರು. ನಾವು ಅವರಿಗೆ ಸನ್ಮಾರ್ಗವನ್ನು ಹೆಚ್ಚಿಸಿಕೊಟ್ಟೆವು.
18 : 14
وَرَبَطْنَا عَلَىٰ قُلُوبِهِمْ إِذْ قَامُوا۟ فَقَالُوا۟ رَبُّنَا رَبُّ ٱلسَّمَـٰوَٰتِ وَٱلْأَرْضِ لَن نَّدْعُوَا۟ مِن دُونِهِۦٓ إِلَـٰهًا ۖ لَّقَدْ قُلْنَآ إِذًا شَطَطًا
ಅವರು ಎದ್ದುನಿಂತು, “ಭೂಮ್ಯಾಕಾಶಗಳ ಪರಿಪಾಲಕನೇ ನಮ್ಮ ಪರಿಪಾಲಕ. ನಾವು ಅವನನ್ನು ಬಿಟ್ಟು ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲ. ಹಾಗೇನಾದರೂ ಆದರೆ ನಾವು ಕಡು ಅನ್ಯಾಯದ ಮಾತನ್ನು ಹೇಳಿದವರಾಗುವೆವು” ಎಂದು ಘೋಷಿಸಿದ ಸಂದರ್ಭದಲ್ಲಿ ನಾವು ಅವರ ಹೃದಯಗಳಿಗೆ ದೃಢತೆಯನ್ನು ನೀಡಿದೆವು.
18 : 15
هَـٰٓؤُلَآءِ قَوْمُنَا ٱتَّخَذُوا۟ مِن دُونِهِۦٓ ءَالِهَةً ۖ لَّوْلَا يَأْتُونَ عَلَيْهِم بِسُلْطَـٰنٍۭ بَيِّنٍ ۖ فَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا
“ನಮ್ಮ ಈ ಜನರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಅವರು ದೇವರುಗಳು ಎಂಬುದಕ್ಕೆ ಇವರೇಕೆ ಸ್ಪಷ್ಟ ಸಾಕ್ಷ್ಯಾಧಾರವನ್ನು ತರುವುದಿಲ್ಲ? ಅಲ್ಲಾಹನ ಹೆಸರಲ್ಲಿ ಸುಳ್ಳು ಆರೋಪಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು?”
18 : 16
وَإِذِ ٱعْتَزَلْتُمُوهُمْ وَمَا يَعْبُدُونَ إِلَّا ٱللَّهَ فَأْوُۥٓا۟ إِلَى ٱلْكَهْفِ يَنشُرْ لَكُمْ رَبُّكُم مِّن رَّحْمَتِهِۦ وَيُهَيِّئْ لَكُم مِّنْ أَمْرِكُم مِّرْفَقًا
(ಅವರು ಪರಸ್ಪರ ಹೇಳಿದರು): “ನೀವು ಅವರನ್ನು ಮತ್ತು ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುತ್ತಿರುವ ದೇವರುಗಳನ್ನು ತೊರೆದಿದ್ದೀರಿ. ಆದ್ದರಿಂದ ನೀವು ಆ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಅವನ ದಯೆಯನ್ನು ಹೇರಳವಾಗಿ ದಯಪಾಲಿಸುವನು ಮತ್ತು ನಿಮ್ಮ ವಿಷಯದಲ್ಲಿ ನಿಮಗೆ ಅನುಕೂಲತೆ ಮಾಡಿಕೊಡುವನು.”
18 : 17
۞ وَتَرَى ٱلشَّمْسَ إِذَا طَلَعَت تَّزَٰوَرُ عَن كَهْفِهِمْ ذَاتَ ٱلْيَمِينِ وَإِذَا غَرَبَت تَّقْرِضُهُمْ ذَاتَ ٱلشِّمَالِ وَهُمْ فِى فَجْوَةٍ مِّنْهُ ۚ ذَٰلِكَ مِنْ ءَايَـٰتِ ٱللَّهِ ۗ مَن يَهْدِ ٱللَّهُ فَهُوَ ٱلْمُهْتَدِ ۖ وَمَن يُضْلِلْ فَلَن تَجِدَ لَهُۥ وَلِيًّا مُّرْشِدًا
ಸೂರ್ಯ ಉದಯಿಸುವಾಗ ಅದು ಅವರ ಗುಹೆಯ ಬಲಭಾಗಕ್ಕೆ ಚಲಿಸುವುದನ್ನು ಮತ್ತು ಸೂರ್ಯ ಅಸ್ತಮಿಸುವಾಗ ಅದು ಅವರನ್ನು ದಾಟಿ ಎಡಭಾಗಕ್ಕೆ ಚಲಿಸುವುದನ್ನು ನೀವು ಕಾಣುವಿರಿ.[1] ಅವರು ಆ ಗುಹೆಯ ವಿಸ್ತಾರವಾದ ಭಾಗದಲ್ಲಿದ್ದಾರೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಒಂದಾಗಿದೆ. ಅಲ್ಲಾಹು ಯಾರಿಗೆ ಸನ್ಮಾರ್ಗವನ್ನು ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುವ ಯಾವುದೇ ರಕ್ಷಕನನ್ನು ನೀವು ಎಂದಿಗೂ ಕಾಣಲಾರಿರಿ.
18 : 18
وَتَحْسَبُهُمْ أَيْقَاظًا وَهُمْ رُقُودٌ ۚ وَنُقَلِّبُهُمْ ذَاتَ ٱلْيَمِينِ وَذَاتَ ٱلشِّمَالِ ۖ وَكَلْبُهُم بَـٰسِطٌ ذِرَاعَيْهِ بِٱلْوَصِيدِ ۚ لَوِ ٱطَّلَعْتَ عَلَيْهِمْ لَوَلَّيْتَ مِنْهُمْ فِرَارًا وَلَمُلِئْتَ مِنْهُمْ رُعْبًا
ಅವರು ಎಚ್ಚರದಲ್ಲಿದ್ದಾರೆಂದು ನೀವು ಭಾವಿಸಬಹುದು. ಆದರೆ ಅವರು ನಿದ್ರೆಯಲ್ಲಿದ್ದಾರೆ. ನಾವು ಅವರನ್ನು ಬಲಭಾಗಕ್ಕೂ ಎಡಭಾಗಕ್ಕೂ ಹೊರಳುವಂತೆ ಮಾಡುತ್ತೇವೆ. ಅವರ ನಾಯಿ ಗುಹೆಯ ಬಾಗಿಲಲ್ಲಿ ತನ್ನ ಎರಡು ಕೈಗಳನ್ನು ಚಾಚಿಕೊಂಡಿದೆ. ನೀವೇನಾದರೂ ಅವರ ಕಡೆಗೆ ಇಣುಕಿದರೆ, ಖಂಡಿತ ಬೆನ್ನು ತಿರುಗಿಸಿ ಓಡುವಿರಿ ಮತ್ತು ಆ ದೃಶ್ಯವನ್ನು ಕಂಡು ನೀವು ಭಯವಿಹ್ವಲರಾಗಿ ಬಿಡುವಿರಿ.
18 : 19
وَكَذَٰلِكَ بَعَثْنَـٰهُمْ لِيَتَسَآءَلُوا۟ بَيْنَهُمْ ۚ قَالَ قَآئِلٌ مِّنْهُمْ كَمْ لَبِثْتُمْ ۖ قَالُوا۟ لَبِثْنَا يَوْمًا أَوْ بَعْضَ يَوْمٍ ۚ قَالُوا۟ رَبُّكُمْ أَعْلَمُ بِمَا لَبِثْتُمْ فَٱبْعَثُوٓا۟ أَحَدَكُم بِوَرِقِكُمْ هَـٰذِهِۦٓ إِلَى ٱلْمَدِينَةِ فَلْيَنظُرْ أَيُّهَآ أَزْكَىٰ طَعَامًا فَلْيَأْتِكُم بِرِزْقٍ مِّنْهُ وَلْيَتَلَطَّفْ وَلَا يُشْعِرَنَّ بِكُمْ أَحَدًا
ಈ ರೀತಿ ಅವರು ಪರಸ್ಪರ ಕೇಳುವುದಕ್ಕಾಗಿ ನಾವು ಅವರನ್ನು ಎಬ್ಬಿಸಿದೆವು. ಅವರಲ್ಲೊಬ್ಬರು ಕೇಳಿದರು: “ನೀವು ಎಷ್ಟು ಕಾಲ ಗುಹೆಯಲ್ಲಿದ್ದಿರಿ?” ಇತರರು ಹೇಳಿದರು: “ನಾವು ಒಂದು ದಿನ ಅಥವಾ ದಿನದ ಕೆಲವು ತಾಸುಗಳಷ್ಟು ಕಾಲ ಗುಹೆಯಲ್ಲಿದ್ದೆವು.” ಅವರು ಹೇಳಿದರು: “ನೀವು ಎಷ್ಟು ಕಾಲ ಗುಹೆಯಲ್ಲಿದ್ದಿರಿ ಎಂಬುದನ್ನು ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನೀವು ನಿಮ್ಮಲ್ಲೊಬ್ಬರನ್ನು ಈ ಬೆಳ್ಳಿ ನಾಣ್ಯದೊಂದಿಗೆ ನಗರಕ್ಕೆ ಕಳುಹಿಸಿ. ಅಲ್ಲಿ ಯಾರ ಬಳಿ ಶುದ್ಧ ಆಹಾರವಿದೆಯೆಂದು ನೋಡಿ ಅವನು ನಿಮಗೆ ಆಹಾರವನ್ನು ತರಲಿ. ಅವನು ಅತ್ಯಂತ ಜಾಗರೂಕನಾಗಿರಲಿ ಮತ್ತು ನಿಮ್ಮ ಬಗ್ಗೆ ಯಾರಿಗೂ ಸುಳಿವು ನೀಡದಿರಲಿ.
18 : 20
إِنَّهُمْ إِن يَظْهَرُوا۟ عَلَيْكُمْ يَرْجُمُوكُمْ أَوْ يُعِيدُوكُمْ فِى مِلَّتِهِمْ وَلَن تُفْلِحُوٓا۟ إِذًا أَبَدًا
ಅವರಿಗೆ ನಿಮ್ಮ ಬಗ್ಗೆ ಮಾಹಿತಿ ಸಿಕ್ಕಿದರೆ, ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು; ಅಥವಾ ನಿಮ್ಮನ್ನು ಬಲವಂತವಾಗಿ ಅವರ ಧರ್ಮಕ್ಕೆ ಸೇರಿಸುವರು. ಹಾಗೇನಾದರೂ ಆದರೆ ನೀವೆಂದಿಗೂ ಯಶಸ್ವಿಯಾಗಲಾರಿರಿ.”
18 : 21
وَكَذَٰلِكَ أَعْثَرْنَا عَلَيْهِمْ لِيَعْلَمُوٓا۟ أَنَّ وَعْدَ ٱللَّهِ حَقٌّ وَأَنَّ ٱلسَّاعَةَ لَا رَيْبَ فِيهَآ إِذْ يَتَنَـٰزَعُونَ بَيْنَهُمْ أَمْرَهُمْ ۖ فَقَالُوا۟ ٱبْنُوا۟ عَلَيْهِم بُنْيَـٰنًا ۖ رَّبُّهُمْ أَعْلَمُ بِهِمْ ۚ قَالَ ٱلَّذِينَ غَلَبُوا۟ عَلَىٰٓ أَمْرِهِمْ لَنَتَّخِذَنَّ عَلَيْهِم مَّسْجِدًا
ಈ ರೀತಿ ನಾವು ಅವರ ಬಗ್ಗೆ ಜನರಿಗೆ ಸುಳಿವು ನೀಡಿದೆವು. ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ಅಂತ್ಯದಿನವು ಸಂಭವಿಸುತ್ತದೆಯೆಂಬ ವಿಷಯದಲ್ಲಿ ಸಂಶಯವೇ ಇಲ್ಲ ಎಂದು ಜನರು ತಿಳಿಯುವುದಕ್ಕಾಗಿ. ಅವರು ಗುಹಾವಾಸಿಗಳ ಬಗ್ಗೆ ಪರಸ್ಪರ ತರ್ಕಿಸುತ್ತಿದ್ದ ಸಂದರ್ಭ. ಅವರು ಹೇಳಿದರು: “ಇವರ ಗುಹೆಯ ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ. ಅವರ ಬಗ್ಗೆ ಅವರ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ.” ಅವರ ವಿಷಯದಲ್ಲಿ ಪ್ರಾಬಲ್ಯ ಪಡೆದವರು ಹೇಳಿದರು: “ನಿಶ್ಚಯವಾಗಿಯೂ ನಾವು ಅವರ ಗುಹೆಯ ಬಳಿ ಒಂದು ಮಸೀದಿಯನ್ನು ನಿರ್ಮಿಸುತ್ತೇವೆ.”
18 : 22
سَيَقُولُونَ ثَلَـٰثَةٌ رَّابِعُهُمْ كَلْبُهُمْ وَيَقُولُونَ خَمْسَةٌ سَادِسُهُمْ كَلْبُهُمْ رَجْمًۢا بِٱلْغَيْبِ ۖ وَيَقُولُونَ سَبْعَةٌ وَثَامِنُهُمْ كَلْبُهُمْ ۚ قُل رَّبِّىٓ أَعْلَمُ بِعِدَّتِهِم مَّا يَعْلَمُهُمْ إِلَّا قَلِيلٌ ۗ فَلَا تُمَارِ فِيهِمْ إِلَّا مِرَآءً ظَـٰهِرًا وَلَا تَسْتَفْتِ فِيهِم مِّنْهُمْ أَحَدًا
ಅವರಲ್ಲಿ ಕೆಲವರು ಹೇಳುತ್ತಾರೆ: “ಗುಹಾವಾಸಿಗಳ ಸಂಖ್ಯೆ ಮೂರು; ನಾಲ್ಕನೆಯದು ಅವರ ನಾಯಿ.” ಇತರ ಕೆಲವರು ಹೇಳುತ್ತಾರೆ: “ಗುಹಾವಾಸಿಗಳ ಸಂಖ್ಯೆ ಐದು; ಆರನೆಯದು ಅವರ ನಾಯಿ.” ಅವರು ಅದೃಶ್ಯ ವಿಷಯಗಳ ಬಗ್ಗೆ ಊಹಿಸಿ ಹೇಳುತ್ತಿದ್ದಾರೆ. ಇತರ ಕೆಲವರು ಹೇಳುತ್ತಾರೆ: “ಗುಹಾವಾಸಿಗಳ ಸಂಖ್ಯೆ ಏಳು; ಎಂಟನೆಯದು ಅವರ ನಾಯಿ.” (ಪ್ರವಾದಿಯವರೇ) ಹೇಳಿರಿ: “ಅವರ ಸಂಖ್ಯೆ ಎಷ್ಟೆಂದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಕೆಲವರಿಗೆ ಮಾತ್ರ ಅವರ ಬಗ್ಗೆ ಮಾಹಿತಿಯಿದೆ. ಆದ್ದರಿಂದ ನೀವು ಅವರ ವಿಷಯದಲ್ಲಿ ಸ್ಪಷ್ಟ ಸಾಕ್ಷ್ಯವಿಲ್ಲದೆ ತರ್ಕಿಸಬೇಡಿ. ಅವರ ಬಗ್ಗೆ ಜನರಲ್ಲಿ ಯಾರೊಡನೆಯೂ ಅಭಿಪ್ರಾಯ ಕೇಳಬೇಡಿ.
18 : 23
وَلَا تَقُولَنَّ لِشَا۟ىْءٍ إِنِّى فَاعِلٌ ذَٰلِكَ غَدًا
ಯಾವುದೇ ವಿಷಯದ ಬಗ್ಗೆ “ನಾನು ನಾಳೆ ಅದನ್ನು ಖಂಡಿತ ಮಾಡುತ್ತೇನೆ” ಎಂದು ಹೇಳಬೇಡಿ.
18 : 24
إِلَّآ أَن يَشَآءَ ٱللَّهُ ۚ وَٱذْكُر رَّبَّكَ إِذَا نَسِيتَ وَقُلْ عَسَىٰٓ أَن يَهْدِيَنِ رَبِّى لِأَقْرَبَ مِنْ هَـٰذَا رَشَدًا
“ಇನ್ ಶಾ ಅಲ್ಲಾಹ್” (ಅಲ್ಲಾಹು ಇಚ್ಛಿಸಿದರೆ ಮಾಡುತ್ತೇನೆ) ಎಂದು ಅದಕ್ಕೆ ಸೇರಿಸದೆ.[1] ನಿಮಗೆ ಅದನ್ನು ಸೇರಿಸಲು ಮರೆತುಹೋದರೆ ನೆನಪಾದಾಗ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. “ಸನ್ಮಾರ್ಗಕ್ಕೆ ಇದಕ್ಕಿಂತಲೂ ಹೆಚ್ಚು ಹತ್ತಿರವಾಗಿರುವ ಮಾತಿಗೆ ನನ್ನ ಪರಿಪಾಲಕನು (ಅಲ್ಲಾಹು) ನನ್ನನ್ನು ಮುನ್ನಡೆಸುವನೆಂದು ನನಗೆ ಸಂಪೂರ್ಣ ಭರವಸೆಯಿದೆ” ಎಂದು ಹೇಳಿರಿ.
18 : 25
وَلَبِثُوا۟ فِى كَهْفِهِمْ ثَلَـٰثَ مِا۟ئَةٍ سِنِينَ وَٱزْدَادُوا۟ تِسْعًا
ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಗಳ ಕಾಲ ವಾಸಿಸಿದ್ದರು ಮತ್ತು ಅವರು ಒಂಬತ್ತು ವರ್ಷಗಳನ್ನು ಹೆಚ್ಚಿಸಿದರು.[1]
18 : 26
قُلِ ٱللَّهُ أَعْلَمُ بِمَا لَبِثُوا۟ ۖ لَهُۥ غَيْبُ ٱلسَّمَـٰوَٰتِ وَٱلْأَرْضِ ۖ أَبْصِرْ بِهِۦ وَأَسْمِعْ ۚ مَا لَهُم مِّن دُونِهِۦ مِن وَلِىٍّ وَلَا يُشْرِكُ فِى حُكْمِهِۦٓ أَحَدًا
ಹೇಳಿರಿ: “ಅವರು ಎಷ್ಟು ಕಾಲ ವಾಸಿಸಿದ್ದರು ಎಂಬ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಭೂಮ್ಯಾಕಾಶಗಳ ಅದೃಶ್ಯ ಜ್ಞಾನವಿರುವುದು ಅವನಿಗೆ ಮಾತ್ರ. ಅವನ ದೃಷ್ಟಿ ಮತ್ತು ಕೇಳುವ ಶಕ್ತಿ ಎಷ್ಟು ಸೂಕ್ಷ್ಮವಾಗಿದೆ! ಅವರಿಗೆ ಅವನ ಹೊರತು ಬೇರೆ ರಕ್ಷಕರಿಲ್ಲ. ಅವನು ತನ್ನ ಶಾಸನಾಧಿಕಾರದಲ್ಲಿ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.”
18 : 27
وَٱتْلُ مَآ أُوحِىَ إِلَيْكَ مِن كِتَابِ رَبِّكَ ۖ لَا مُبَدِّلَ لِكَلِمَـٰتِهِۦ وَلَن تَجِدَ مِن دُونِهِۦ مُلْتَحَدًا
ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಗ್ರಂಥದಿಂದ ನೀಡಲಾದ ದೇವವಾಣಿಗಳನ್ನು ಪಠಿಸಿರಿ. ಅವನ ವಚನಗಳಿಗೆ ಬದಲಾವಣೆ ತರಲು ಯಾರಿಗೂ ಸಾಧ್ಯವಿಲ್ಲ. ಅವನ ಹೊರತು ಯಾವುದೇ ಆಶ್ರಯವನ್ನು ನೀವೆಂದಿಗೂ ಕಾಣಲಾರಿರಿ.
18 : 28
وَٱصْبِرْ نَفْسَكَ مَعَ ٱلَّذِينَ يَدْعُونَ رَبَّهُم بِٱلْغَدَوٰةِ وَٱلْعَشِىِّ يُرِيدُونَ وَجْهَهُۥ ۖ وَلَا تَعْدُ عَيْنَاكَ عَنْهُمْ تُرِيدُ زِينَةَ ٱلْحَيَوٰةِ ٱلدُّنْيَا ۖ وَلَا تُطِعْ مَنْ أَغْفَلْنَا قَلْبَهُۥ عَن ذِكْرِنَا وَٱتَّبَعَ هَوَىٰهُ وَكَانَ أَمْرُهُۥ فُرُطًا
ತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ, ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರ ಜೊತೆಗೆ ನೀವು ನಿಮ್ಮನ್ನು ಸ್ಥೈರ್ಯದಿಂದ ನಿಲ್ಲಿಸಿರಿ. ಇಹಲೋಕ ಜೀವನದ ಅಲಂಕಾರಗಳಿಗೆ ಮರುಳಾಗಿ ನಿಮ್ಮ ದೃಷ್ಟಿಯು ಅವರಿಂದ ದೂರವಾಗದಿರಲಿ. ನಾವು ಯಾರ ಹೃದಯಕ್ಕೆ ನಮ್ಮ ನೆನಪು ಬರದಂತೆ ಮಾಡಿದ್ದೇವೆಯೋ, ಯಾರು ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾನೋ ಮತ್ತು ಯಾರ ಕರ್ಮಗಳು ಹದ್ದು ಮೀರಿವೆಯೋ ಅವರನ್ನು ಅನುಸರಿಸಬೇಡಿ.
18 : 29
وَقُلِ ٱلْحَقُّ مِن رَّبِّكُمْ ۖ فَمَن شَآءَ فَلْيُؤْمِن وَمَن شَآءَ فَلْيَكْفُرْ ۚ إِنَّآ أَعْتَدْنَا لِلظَّـٰلِمِينَ نَارًا أَحَاطَ بِهِمْ سُرَادِقُهَا ۚ وَإِن يَسْتَغِيثُوا۟ يُغَاثُوا۟ بِمَآءٍ كَٱلْمُهْلِ يَشْوِى ٱلْوُجُوهَ ۚ بِئْسَ ٱلشَّرَابُ وَسَآءَتْ مُرْتَفَقًا
ಹೇಳಿರಿ: “ನನ್ನ ಈ ಸತ್ಯಸಂದೇಶವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದಾಗಿದೆ. ಇಚ್ಛೆಯಿರುವವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಇಚ್ಛೆಯಿಲ್ಲದವರು ನಿಷೇಧಿಸಲಿ. ನಿಶ್ಚಯವಾಗಿಯೂ, ನಾವು ಅಕ್ರಮಿಗಳಿಗೆ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿವೆ. ಅವರು ಕುಡಿಯಲು ನೀರು ಕೇಳುವಾಗ ನಾವು ಅವರಿಗೆ ಕಾಯಿಸಿದ ಎಣ್ಣೆಯ ಮಡ್ಡಿಯಂತಹ ನೀರನ್ನು ಕೊಡುವೆವು. ಅದು ಅವರ ಮುಖಗಳನ್ನು ಸುಟ್ಟು ಬಿಡುತ್ತದೆ. ಆ ಪಾನೀಯವು ಬಹಳ ನಿಕೃಷ್ಟವಾಗಿದೆ. ಆ ವಾಸಸ್ಥಳವು ಕೂಡ ಬಹಳ ನಿಕೃಷ್ಟವಾಗಿದೆ.
18 : 30
إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ إِنَّا لَا نُضِيعُ أَجْرَ مَنْ أَحْسَنَ عَمَلًا
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅತ್ಯುತ್ತಮ ಕರ್ಮಗಳನ್ನು ಮಾಡುವ ಯಾರ ಪ್ರತಿಫಲವನ್ನೂ ನಾವು ವ್ಯರ್ಥಗೊಳಿಸುವುದಿಲ್ಲ.
18 : 31
أُو۟لَـٰٓئِكَ لَهُمْ جَنَّـٰتُ عَدْنٍ تَجْرِى مِن تَحْتِهِمُ ٱلْأَنْهَـٰرُ يُحَلَّوْنَ فِيهَا مِنْ أَسَاوِرَ مِن ذَهَبٍ وَيَلْبَسُونَ ثِيَابًا خُضْرًا مِّن سُندُسٍ وَإِسْتَبْرَقٍ مُّتَّكِـِٔينَ فِيهَا عَلَى ٱلْأَرَآئِكِ ۚ نِعْمَ ٱلثَّوَابُ وَحَسُنَتْ مُرْتَفَقًا
ಅವರಿಗೆ ಶಾಶ್ವತವಾಸದ ಸ್ವರ್ಗೋದ್ಯಾನಗಳಿವೆ. ಅವರ ತಳಭಾಗದಿಂದ ನದಿಗಳು ಹರಿಯುತ್ತವೆ. ಅಲ್ಲಿ ಅವರಿಗೆ ಚಿನ್ನದ ಕಡಗಗಳನ್ನು ತೊಡಿಸಲಾಗುವುದು. ಅವರು ನಯವಾದ ಮತ್ತು ದಪ್ಪ ಹಸಿರು ರೇಷ್ಮೆ ಬಟ್ಟೆಗಳನ್ನು ಧರಿಸುವರು. ಅಲ್ಲಿ ಅವರು ಮಂಚಗಳಲ್ಲಿ ಒರಗಿ ಕುಳಿತು ವಿಶ್ರಾಂತಿ ಪಡೆಯುವರು. ಆ ಪ್ರತಿಫಲವು ಬಹಳ ಉತ್ಕೃಷ್ಟವಾಗಿದೆ. ಆ ವಾಸಸ್ಥಳವು ಬಹಳ ಶ್ರೇಷ್ಠವಾಗಿದೆ.
18 : 32
۞ وَٱضْرِبْ لَهُم مَّثَلًا رَّجُلَيْنِ جَعَلْنَا لِأَحَدِهِمَا جَنَّتَيْنِ مِنْ أَعْنَـٰبٍ وَحَفَفْنَـٰهُمَا بِنَخْلٍ وَجَعَلْنَا بَيْنَهُمَا زَرْعًا
ಅವರಿಗೆ ಒಂದು ಉದಾಹರಣೆಯನ್ನು ತಿಳಿಸಿಕೊಡಿ. ಇಬ್ಬರು ವ್ಯಕ್ತಿಗಳಿದ್ದರು. ಅವರಲ್ಲೊಬ್ಬನಿಗೆ ನಾವು ಎರಡು ದ್ರಾಕ್ಷಿ ತೋಟಗಳನ್ನು ನೀಡಿದ್ದೆವು. ಆ ಎರಡು ತೋಟಗಳನ್ನು ಖರ್ಜೂರ ಮರಗಳು ಸುತ್ತುವರಿಯುವಂತೆ ಮಾಡಿದ್ದೆವು. ಆ ತೋಟಗಳ ಮಧ್ಯೆ ಹೊಲವನ್ನು ಕೂಡ ಮಾಡಿಕೊಟ್ಟಿದ್ದೆವು.
18 : 33
كِلْتَا ٱلْجَنَّتَيْنِ ءَاتَتْ أُكُلَهَا وَلَمْ تَظْلِم مِّنْهُ شَيْـًٔا ۚ وَفَجَّرْنَا خِلَـٰلَهُمَا نَهَرًا
ಆ ಎರಡು ತೋಟಗಳೂ ಅವುಗಳ ಫಲಗಳನ್ನು ನೀಡುತ್ತಿದ್ದವು. ಅದರಲ್ಲಿ ಅವು ಏನನ್ನೂ ಕಡಿಮೆ ಮಾಡಿರಲಿಲ್ಲ. ಅವುಗಳ ಮಧ್ಯೆ ತುಂಬಿ ಹರಿಯುವ ಒಂದು ಹೊಳೆಯನ್ನೂ ಮಾಡಿಕೊಟ್ಟಿದ್ದೆವು.
18 : 34
وَكَانَ لَهُۥ ثَمَرٌ فَقَالَ لِصَـٰحِبِهِۦ وَهُوَ يُحَاوِرُهُۥٓ أَنَا۠ أَكْثَرُ مِنكَ مَالًا وَأَعَزُّ نَفَرًا
ಈ ಮಧ್ಯೆ, ಅವನ ಬಳಿ ಹಣ್ಣುಗಳಿದ್ದಾಗ, ಅವನು ತನ್ನ ಗೆಳೆಯನೊಡನೆ ಮಾತನಾಡುತ್ತಾ ಹೇಳಿದನು: “ನನಗೆ ನಿನಗಿಂತಲೂ ಹೆಚ್ಚು ಆಸ್ತಿಯಿದೆ. ಸಂತಾನದ ವಿಷಯದಲ್ಲೂ ನಾನು ನಿನಗಿಂತ ಪ್ರಬಲನಾಗಿದ್ದೇನೆ.”
18 : 35
وَدَخَلَ جَنَّتَهُۥ وَهُوَ ظَالِمٌ لِّنَفْسِهِۦ قَالَ مَآ أَظُنُّ أَن تَبِيدَ هَـٰذِهِۦٓ أَبَدًا
ಅವನು ತನ್ನ ತೋಟವನ್ನು ಪ್ರವೇಶಿಸಿದನು. ಅವನು ಸ್ವಯಂ ಅಕ್ರಮವೆಸಗಿದವನಾಗಿದ್ದನು. ಅವನು ಹೇಳಿದನು: “ಇದು ಯಾವತ್ತಾದರೂ ನಾಶವಾಗಬಹುದೆಂದು ನಾನು ಭಾವಿಸುವುದೇ ಇಲ್ಲ.
18 : 36
وَمَآ أَظُنُّ ٱلسَّاعَةَ قَآئِمَةً وَلَئِن رُّدِدتُّ إِلَىٰ رَبِّى لَأَجِدَنَّ خَيْرًا مِّنْهَا مُنقَلَبًا
ಅಂತ್ಯಸಮಯವು ಸಂಭವಿಸುವುದೆಂದು ಕೂಡ ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಹಿಂದಿರುಗಿಸಲ್ಪಟ್ಟರೂ ಸಹ, ನಾನು ಅಲ್ಲಿಯೂ ಕೂಡ ಇದಕ್ಕಿಂತಲೂ ಶ್ರೇಷ್ಠವಾದುದನ್ನು ಬದಲಿಯಾಗಿ ಪಡೆಯುವೆನು.”
18 : 37
قَالَ لَهُۥ صَاحِبُهُۥ وَهُوَ يُحَاوِرُهُۥٓ أَكَفَرْتَ بِٱلَّذِى خَلَقَكَ مِن تُرَابٍ ثُمَّ مِن نُّطْفَةٍ ثُمَّ سَوَّىٰكَ رَجُلًا
ಅವನೊಡನೆ ಮಾತನಾಡುತ್ತಾ ಅವನ ಗೆಳೆಯ ಹೇಳಿದನು: “ನಿನ್ನನ್ನು ಮಣ್ಣಿನಿಂದ, ನಂತರ ವೀರ್ಯದಿಂದ ಸೃಷ್ಟಿಸಿ, ನಿನ್ನನ್ನು ಒಬ್ಬ ಪೂರ್ಣ ಮಾನವನನ್ನಾಗಿ ಮಾಡಿದ ಅಲ್ಲಾಹನನ್ನು ನೀನು ನಿಷೇಧಿಸುವೆಯಾ?
18 : 38
لَّـٰكِنَّا۠ هُوَ ٱللَّهُ رَبِّى وَلَآ أُشْرِكُ بِرَبِّىٓ أَحَدًا
ಆದರೆ ಆ ಅಲ್ಲಾಹನೇ ನನ್ನ ಪರಿಪಾಲಕನೆಂದು ನಾನು ದೃಢವಾಗಿ ನಂಬುತ್ತೇನೆ. ನಾನು ನನ್ನ ಪರಿಪಾಲಕನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.
18 : 39
وَلَوْلَآ إِذْ دَخَلْتَ جَنَّتَكَ قُلْتَ مَا شَآءَ ٱللَّهُ لَا قُوَّةَ إِلَّا بِٱللَّهِ ۚ إِن تَرَنِ أَنَا۠ أَقَلَّ مِنكَ مَالًا وَوَلَدًا
ನೀನು ನಿನ್ನ ತೋಟವನ್ನು ಪ್ರವೇಶಿಸುವಾಗ, “ಇವೆಲ್ಲವೂ ಅಲ್ಲಾಹು ಇಚ್ಛಿಸಿದ್ದು. ಅಲ್ಲಾಹನಿಂದಲ್ಲದೆ ಯಾವುದೇ ಶಕ್ತಿಯಿಲ್ಲ” ಎಂದು ಏಕೆ ಹೇಳಲಿಲ್ಲ? ಆಸ್ತಿ ಮತ್ತು ಸಂತಾನದಲ್ಲಿ ನೀನು ನನ್ನನ್ನು ನಿನಗಿಂತಲೂ ಕೀಳಾಗಿ ಕಾಣುತ್ತಿದ್ದರೆ.
18 : 40
فَعَسَىٰ رَبِّىٓ أَن يُؤْتِيَنِ خَيْرًا مِّن جَنَّتِكَ وَيُرْسِلَ عَلَيْهَا حُسْبَانًا مِّنَ ٱلسَّمَآءِ فَتُصْبِحَ صَعِيدًا زَلَقًا
ನನ್ನ ಪರಿಪಾಲಕನು (ಅಲ್ಲಾಹು) ನಿನ್ನ ತೋಟಕ್ಕಿಂತಲೂ ಶ್ರೇಷ್ಠವಾದುದನ್ನು ನನಗೆ ನೀಡಬಹುದು ಮತ್ತು ನಿನ್ನ ತೋಟಕ್ಕೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿ ಅದನ್ನು ಜಾರುಭೂಮಿಯಾಗಿ ಪರಿವರ್ತಿಸಬಹುದು.
18 : 41
أَوْ يُصْبِحَ مَآؤُهَا غَوْرًا فَلَن تَسْتَطِيعَ لَهُۥ طَلَبًا
ಅಥವಾ ಅದರ ನೀರನ್ನು ಆಳಕ್ಕೆ ಇಂಗಿಸಬಹುದು. ಆಗ ಅದನ್ನು ಹುಡುಕಿ ತರಲು ನಿನಗೆ ಸಾಧ್ಯವಾಗದು.”
18 : 42
وَأُحِيطَ بِثَمَرِهِۦ فَأَصْبَحَ يُقَلِّبُ كَفَّيْهِ عَلَىٰ مَآ أَنفَقَ فِيهَا وَهِىَ خَاوِيَةٌ عَلَىٰ عُرُوشِهَا وَيَقُولُ يَـٰلَيْتَنِى لَمْ أُشْرِكْ بِرَبِّىٓ أَحَدًا
ಅವನ ಎಲ್ಲಾ ಫಲಗಳು ಆವರಿಸಲ್ಪಟ್ಟಿತು (ಸಂಪೂರ್ಣ ನಾಶವಾಯಿತು). ಆಗ ಅವನು ಅದಕ್ಕೆ ಮಾಡಿದ ಖರ್ಚುಗಳಿಗಾಗಿ (ಹತಾಶೆಯಿಂದ) ಕೈಗಳನ್ನು ತಿರುಗಿಸತೊಡಗಿದನು. ಆ ತೋಟಗಳು ಸಂಪೂರ್ಣವಾಗಿ ಮಗುಚಿ ಬಿದ್ದಿದ್ದವು. ಅವನು ಹೇಳಿದನು: “ನಾನು ನನ್ನ ಪರಿಪಾಲಕನೊಡನೆ (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”
18 : 43
وَلَمْ تَكُن لَّهُۥ فِئَةٌ يَنصُرُونَهُۥ مِن دُونِ ٱللَّهِ وَمَا كَانَ مُنتَصِرًا
ಅಲ್ಲಾಹನಿಗೆ ವಿರುದ್ಧವಾಗಿ ಅವನ ರಕ್ಷಣೆ ಮಾಡಲು ಯಾವುದೇ ತಂಡವೂ ಬರಲಿಲ್ಲ. ಅವನಿಗೆ ಸ್ವಯಂ ರಕ್ಷಣೆ ಪಡೆಯಲೂ ಸಾಧ್ಯವಾಗಲಿಲ್ಲ.
18 : 44
هُنَالِكَ ٱلْوَلَـٰيَةُ لِلَّهِ ٱلْحَقِّ ۚ هُوَ خَيْرٌ ثَوَابًا وَخَيْرٌ عُقْبًا
ಅಲ್ಲಿ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನದ್ದೆಂದು (ಸಾಬೀತಾಗಿದೆ). ಅವನು ಪ್ರತಿಫಲ ನೀಡುವುದಲ್ಲಿ ಅತ್ಯುತ್ತಮನಾಗಿದ್ದಾನೆ ಮತ್ತು ಅಂತಿಮ ಫಲಿತಾಂಶ ನೀಡುವುದರಲ್ಲೂ ಅತ್ಯುತ್ತಮನಾಗಿದ್ದಾನೆ.
18 : 45
وَٱضْرِبْ لَهُم مَّثَلَ ٱلْحَيَوٰةِ ٱلدُّنْيَا كَمَآءٍ أَنزَلْنَـٰهُ مِنَ ٱلسَّمَآءِ فَٱخْتَلَطَ بِهِۦ نَبَاتُ ٱلْأَرْضِ فَأَصْبَحَ هَشِيمًا تَذْرُوهُ ٱلرِّيَـٰحُ ۗ وَكَانَ ٱللَّهُ عَلَىٰ كُلِّ شَىْءٍ مُّقْتَدِرًا
(ಪ್ರವಾದಿಯವರೇ) ಅವರಿಗೆ ಇಹಲೋಕದ ಬಗ್ಗೆ ಒಂದು ಉದಾಹರಣೆಯನ್ನು ತಿಳಿಸಿಕೊಡಿ. ಅದು (ಇಹಲೋಕವು) ನಾವು ಆಕಾಶದಿಂದ ಸುರಿಸಿದ ಮಳೆಯಂತೆ. ಭೂಮಿಯ ಸಸ್ಯಗಳು ಅದರೊಂದಿಗೆ ಬೆರೆತು ಬೆಳೆದವು. ನಂತರ ಅವು ಗಾಳಿ ಬೀಸಿದರೆ ಹಾರಿ ಹೋಗುವ ಧೂಳಿಯಂತಾದವು. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸರ್ವಶಕ್ತನಾಗಿದ್ದಾನೆ.
18 : 46
ٱلْمَالُ وَٱلْبَنُونَ زِينَةُ ٱلْحَيَوٰةِ ٱلدُّنْيَا ۖ وَٱلْبَـٰقِيَـٰتُ ٱلصَّـٰلِحَـٰتُ خَيْرٌ عِندَ رَبِّكَ ثَوَابًا وَخَيْرٌ أَمَلًا
ಆಸ್ತಿ ಮತ್ತು ಸಂತಾನಗಳು ಇಹಲೋಕ ಜೀವನದ ಅಲಂಕಾರಗಳಾಗಿವೆ. ಆದರೆ ಬಾಕಿಯಾಗುವ ಸತ್ಕರ್ಮಗಳು ತಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅತ್ಯುತ್ತಮ ಪ್ರತಿಫಲವನ್ನು ಮತ್ತು ಅತ್ಯುತ್ತಮ ಭರವಸೆಯನ್ನು ಹೊಂದಿವೆ.
18 : 47
وَيَوْمَ نُسَيِّرُ ٱلْجِبَالَ وَتَرَى ٱلْأَرْضَ بَارِزَةً وَحَشَرْنَـٰهُمْ فَلَمْ نُغَادِرْ مِنْهُمْ أَحَدًا
ನಾವು ಪರ್ವತಗಳನ್ನು ಚಲಿಸುವಂತೆ ಮಾಡುವ ಮತ್ತು ಭೂಮಿಯನ್ನು ನೀವು ಸಮತಟ್ಟಾದ ಬಯಲಿನಂತೆ ಕಾಣುವ ಹಾಗೂ ನಾವು ಅವರಲ್ಲಿ (ಮನುಷ್ಯರಲ್ಲಿ) ಒಬ್ಬರನ್ನೂ ಬಿಡದೆ ಒಟ್ಟುಗೂಡಿಸುವ ದಿನ!
18 : 48
وَعُرِضُوا۟ عَلَىٰ رَبِّكَ صَفًّا لَّقَدْ جِئْتُمُونَا كَمَا خَلَقْنَـٰكُمْ أَوَّلَ مَرَّةٍۭ ۚ بَلْ زَعَمْتُمْ أَلَّن نَّجْعَلَ لَكُم مَّوْعِدًا
ಅವರನ್ನು ತಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ಸಾಲು ಸಾಲಾಗಿ ಪ್ರದರ್ಶಿಸಲಾಗುವುದು. (ಅಲ್ಲಾಹು ಹೇಳುವನು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ಒಂದು ಸಮಯವನ್ನು ಮೀಸಲಿಡುವುದಿಲ್ಲ ಎಂದು ನೀವು ವಾದಿಸುತ್ತಿದ್ದಿರಿ.”
18 : 49
وَوُضِعَ ٱلْكِتَـٰبُ فَتَرَى ٱلْمُجْرِمِينَ مُشْفِقِينَ مِمَّا فِيهِ وَيَقُولُونَ يَـٰوَيْلَتَنَا مَالِ هَـٰذَا ٱلْكِتَـٰبِ لَا يُغَادِرُ صَغِيرَةً وَلَا كَبِيرَةً إِلَّآ أَحْصَىٰهَا ۚ وَوَجَدُوا۟ مَا عَمِلُوا۟ حَاضِرًا ۗ وَلَا يَظْلِمُ رَبُّكَ أَحَدًا
ಕರ್ಮ ಪುಸ್ತಕವನ್ನು ಇಡಲಾಗುವುದು. ಆಗ ಅಪರಾಧಿಗಳು ಅದರಲ್ಲಿರುವ ಉಲ್ಲೇಖಗಳನ್ನು ನೋಡಿ ಭಯದಿಂದ ನಡುಗುವುದನ್ನು ನೀವು ನೋಡುವಿರಿ. ಅವರು ಹೇಳುವರು: “ಅಯ್ಯೋ ನಮ್ಮ ದುರದೃಷ್ಟವೇ! ಇದೆಂತಹ ಪುಸ್ತಕ? ಇದರಲ್ಲಿ ಚಿಕ್ಕ ಮತ್ತು ದೊಡ್ಡದಾದ ಯಾವುದನ್ನೂ ದಾಖಲಿಸದೆ ಬಿಟ್ಟಿಲ್ಲವಲ್ಲ!” ಅವರು ಮಾಡಿದ ಎಲ್ಲಾ ಕರ್ಮಗಳನ್ನೂ ಅವರು ಅದರಲ್ಲಿ ದಾಖಲಾಗಿರುವುದನ್ನು ಕಾಣುವರು. ನಿಮ್ಮ ಪರಿಪಾಲಕನು (ಅಲ್ಲಾಹು) ಯಾರಿಗೂ ಅನ್ಯಾಯ ಮಾಡುವವನಲ್ಲ.
18 : 50
وَإِذْ قُلْنَا لِلْمَلَـٰٓئِكَةِ ٱسْجُدُوا۟ لِـَٔادَمَ فَسَجَدُوٓا۟ إِلَّآ إِبْلِيسَ كَانَ مِنَ ٱلْجِنِّ فَفَسَقَ عَنْ أَمْرِ رَبِّهِۦٓ ۗ أَفَتَتَّخِذُونَهُۥ وَذُرِّيَّتَهُۥٓ أَوْلِيَآءَ مِن دُونِى وَهُمْ لَكُمْ عَدُوٌّۢ ۚ بِئْسَ لِلظَّـٰلِمِينَ بَدَلًا
ನಾವು ದೇವದೂತರುಗಳೊಡನೆ, “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ಹೇಳಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು. ಇಬ್ಲೀಸನ ಹೊರತು. ಅವನು ಜಿನ್ನ್‌ಗಳಲ್ಲಿ ಸೇರಿದ್ದನು. ಅವನು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದನು. ಹೀಗಿರುವಾಗ, ನೀವು ನನ್ನನ್ನು ಬಿಟ್ಟು ಅವನನ್ನು ಮತ್ತು ಅವನ ಸಂತಾನವನ್ನು ಮಿತ್ರರಾಗಿ ಸ್ವೀಕರಿಸುವಿರಾ? ವಾಸ್ತವವಾಗಿ ಅವರು ನಿಮ್ಮ ವೈರಿಗಳಾಗಿದ್ದೂ ಸಹ. ಅಕ್ರಮಿಗಳಿಗೆ ಬದಲಿಯಾಗಿ ಸಿಕ್ಕಿದ್ದು ಬಹಳ ನಿಕೃಷ್ಟವಾಗಿದೆ.
18 : 51
۞ مَّآ أَشْهَدتُّهُمْ خَلْقَ ٱلسَّمَـٰوَٰتِ وَٱلْأَرْضِ وَلَا خَلْقَ أَنفُسِهِمْ وَمَا كُنتُ مُتَّخِذَ ٱلْمُضِلِّينَ عَضُدًا
ನಾನು ಭೂಮ್ಯಾಕಾಶಗಳ ಸೃಷ್ಟಿಸುವಾಗ ಅಥವಾ ಸ್ವತಃ ಅವರನ್ನೇ ಸೃಷ್ಟಿಸುವಾಗ ಅವರನ್ನು (ಶೈತಾನರನ್ನು) ಅದಕ್ಕೆ ಸಾಕ್ಷಿಗಳನ್ನಾಗಿ ಮಾಡಲಿಲ್ಲ. ದಾರಿತಪ್ಪಿಸುವವರನ್ನು ನಾನು ಸಹಾಯಕರನ್ನಾಗಿ ಮಾಡುವುದೂ ಇಲ್ಲ.
18 : 52
وَيَوْمَ يَقُولُ نَادُوا۟ شُرَكَآءِىَ ٱلَّذِينَ زَعَمْتُمْ فَدَعَوْهُمْ فَلَمْ يَسْتَجِيبُوا۟ لَهُمْ وَجَعَلْنَا بَيْنَهُم مَّوْبِقًا
“ನೀವು ನನ್ನ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ದೇವರುಗಳನ್ನು ಕರೆಯಿರಿ” ಎಂದು ಅಲ್ಲಾಹು ಆದೇಶಿಸುವ ದಿನ. ಅವರು ಆ ದೇವರುಗಳನ್ನು ಕರೆಯುವರು. ಆದರೆ ಅವರು ಇವರಿಗೆ ಉತ್ತರ ನೀಡುವುದಿಲ್ಲ. ನಾವು ಅವರ ನಡುವೆ ವಿನಾಶದ ಕಂದಕವನ್ನು ನಿರ್ಮಿಸುವೆವು.
18 : 53
وَرَءَا ٱلْمُجْرِمُونَ ٱلنَّارَ فَظَنُّوٓا۟ أَنَّهُم مُّوَاقِعُوهَا وَلَمْ يَجِدُوا۟ عَنْهَا مَصْرِفًا
ಅಪರಾಧಿಗಳು ನರಕವನ್ನು ಕಣ್ಣಾರೆ ನೋಡುವರು. ಅವರು ಅದರಲ್ಲಿ ಬೀಳುವರೆಂದು ಅವರಿಗೆ ಖಾತ್ರಿಯಾಗುವುದು. ಅದರಿಂದ ತಪ್ಪಿಸಿಕೊಳ್ಳುವ ಯಾವುದೇ ಮಾರ್ಗವನ್ನು ಅವರು ಕಾಣಲಾರರು.
18 : 54
وَلَقَدْ صَرَّفْنَا فِى هَـٰذَا ٱلْقُرْءَانِ لِلنَّاسِ مِن كُلِّ مَثَلٍ ۚ وَكَانَ ٱلْإِنسَـٰنُ أَكْثَرَ شَىْءٍ جَدَلًا
ನಿಶ್ಚಯವಾಗಿಯೂ ನಾವು ಈ ಕುರ್‌ಆನಿನಲ್ಲಿ ಮನುಷ್ಯರಿಗೆ ಎಲ್ಲಾ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ವಾಸ್ತವವಾಗಿ, ಮನುಷ್ಯನು ಅತಿ ಹೆಚ್ಚು ತರ್ಕಿಸುವವನಾಗಿದ್ದಾನೆ.
18 : 55
وَمَا مَنَعَ ٱلنَّاسَ أَن يُؤْمِنُوٓا۟ إِذْ جَآءَهُمُ ٱلْهُدَىٰ وَيَسْتَغْفِرُوا۟ رَبَّهُمْ إِلَّآ أَن تَأْتِيَهُمْ سُنَّةُ ٱلْأَوَّلِينَ أَوْ يَأْتِيَهُمُ ٱلْعَذَابُ قُبُلًا
ಜನರ ಬಳಿಗೆ ಸನ್ಮಾರ್ಗವು ಬಂದಾಗ ಅವರು ಅದರಲ್ಲಿ ವಿಶ್ವಾಸವಿಡದಿರಲು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸದಿರಲು ಅವರಿಗೆ ತಡೆಯಾಗಿರುವುದು, ಪೂರ್ವಿಕರ ವಿಷಯದಲ್ಲಿ ಕೈಗೊಳ್ಳಲಾದ ಅದೇ ಕ್ರಮವು ನಮಗೂ ಬರಬೇಕು ಅಥವಾ ಶಿಕ್ಷೆಯನ್ನು ನಮ್ಮ ಕಣ್ಣ ಮುಂದೆ ತರಬೇಕು ಎಂಬುದು ಮಾತ್ರವಾಗಿತ್ತು.
18 : 56
وَمَا نُرْسِلُ ٱلْمُرْسَلِينَ إِلَّا مُبَشِّرِينَ وَمُنذِرِينَ ۚ وَيُجَـٰدِلُ ٱلَّذِينَ كَفَرُوا۟ بِٱلْبَـٰطِلِ لِيُدْحِضُوا۟ بِهِ ٱلْحَقَّ ۖ وَٱتَّخَذُوٓا۟ ءَايَـٰتِى وَمَآ أُنذِرُوا۟ هُزُوًا
ನಾವು ಸಂದೇಶವಾಹಕರುಗಳನ್ನು ಕಳುಹಿಸುವುದು ಸುವಾರ್ತೆ ತಿಳಿಸಲು ಮತ್ತು ಎಚ್ಚರಿಕೆ ನೀಡಲು ಮಾತ್ರ. ಸತ್ಯನಿಷೇಧಿಗಳು ಅಸತ್ಯದ ಆಧಾರದಲ್ಲಿ ತರ್ಕಿಸುತ್ತಾರೆ ಮತ್ತು ಅದರ ಮೂಲಕ ಸತ್ಯವನ್ನು ನಾಶ ಮಾಡಬಹುದೆಂದು ಭಾವಿಸುತ್ತಾರೆ. ಅವರು ನನ್ನ ವಚನಗಳನ್ನು ಮತ್ತು ಅವರಿಗೆ ನೀಡಲಾದ ಎಚ್ಚರಿಕೆಗಳನ್ನು ತಮಾಷೆಯಾಗಿ ಸ್ವೀಕರಿಸುತ್ತಾರೆ.
18 : 57
وَمَنْ أَظْلَمُ مِمَّن ذُكِّرَ بِـَٔايَـٰتِ رَبِّهِۦ فَأَعْرَضَ عَنْهَا وَنَسِىَ مَا قَدَّمَتْ يَدَاهُ ۚ إِنَّا جَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِىٓ ءَاذَانِهِمْ وَقْرًا ۖ وَإِن تَدْعُهُمْ إِلَى ٱلْهُدَىٰ فَلَن يَهْتَدُوٓا۟ إِذًا أَبَدًا
ತನ್ನ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅದನ್ನು ಲೆಕ್ಕಿಸದವನು ಮತ್ತು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ದುಷ್ಕರ್ಮಗಳನ್ನು ಮರೆತವನಿಗಿಂತಲೂ ದೊಡ್ಡ ಅಕ್ರಮಿ ಯಾರು? ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳಿಗೆ ಪರದೆಯನ್ನು ಹಾಕಿದ್ದೇವೆ ಮತ್ತು ಅವರ ಕಿವಿಗಳಿಗೆ ಕಿವುಡುತನವಿದೆ. ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೂ ಅವರು ಎಂದಿಗೂ ಸನ್ಮಾರ್ಗವನ್ನು ಸ್ವೀಕರಿಸುವುದಿಲ್ಲ.
18 : 58
وَرَبُّكَ ٱلْغَفُورُ ذُو ٱلرَّحْمَةِ ۖ لَوْ يُؤَاخِذُهُم بِمَا كَسَبُوا۟ لَعَجَّلَ لَهُمُ ٱلْعَذَابَ ۚ بَل لَّهُم مَّوْعِدٌ لَّن يَجِدُوا۟ مِن دُونِهِۦ مَوْئِلًا
ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಾಶೀಲನು ಮತ್ತು ಪರಮ ದಯಾಳುವಾಗಿದ್ದಾನೆ. ಅವರು ಮಾಡಿದ ದುಷ್ಕರ್ಮಗಳಿಗಾಗಿ ಅವನು ಅವರನ್ನು ಹಿಡಿಯುತ್ತಿದ್ದರೆ, ಅವನು ಅವರಿಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು. ಆದರೆ ಅವರಿಗೆ ಒಂದು ನಿಶ್ಚಿತ ಅವಧಿಯಿದೆ. ಅದರಿಂದ ತಪ್ಪಿಸಿಕೊಳ್ಳುವ ಯಾವುದೇ ಸ್ಥಳವನ್ನೂ ಅವರು ಕಾಣಲಾರರು.
18 : 59
وَتِلْكَ ٱلْقُرَىٰٓ أَهْلَكْنَـٰهُمْ لَمَّا ظَلَمُوا۟ وَجَعَلْنَا لِمَهْلِكِهِم مَّوْعِدًا
ಆ ಊರುಗಳ ಜನರು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ನಾವು ಅವರ ನಾಶಕ್ಕೆ ಒಂದು ನಿಶ್ಚಿತ ಅವಧಿಯನ್ನೂ ಇಟ್ಟಿದ್ದೆವು.
18 : 60
وَإِذْ قَالَ مُوسَىٰ لِفَتَىٰهُ لَآ أَبْرَحُ حَتَّىٰٓ أَبْلُغَ مَجْمَعَ ٱلْبَحْرَيْنِ أَوْ أَمْضِىَ حُقُبًا
ಮೂಸಾ ತನ್ನ ಸೇವಕನೊಡನೆ ಹೇಳಿದ ಸಂದರ್ಭ: “ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪುವ ತನಕ ನಾನು ನಡೆಯುತ್ತಲೇ ಇರುವೆನು. ಅದಕ್ಕಾಗಿ ದೀರ್ಘ ಸಮಯ ಪ್ರಯಾಣ ಮಾಡಬೇಕಾಗಿ ಬಂದರೂ ಸಹ.”[1]
18 : 61
فَلَمَّا بَلَغَا مَجْمَعَ بَيْنِهِمَا نَسِيَا حُوتَهُمَا فَٱتَّخَذَ سَبِيلَهُۥ فِى ٱلْبَحْرِ سَرَبًا
ನಂತರ ಅವರು ಎರಡು ಕಡಲುಗಳ ಸಂಗಮ ಸ್ಥಳವನ್ನು ತಲುಪಿದಾಗ ತಮ್ಮಲ್ಲಿದ್ದ ಮೀನನ್ನು ಮರೆತುಬಿಟ್ಟರು. ಅದು ಸಮುದ್ರಕ್ಕೆ ನೆಗೆದು ತಾನು ಸಾಗಿದ ಹಾದಿಯನ್ನು ಒಂದು ಸುರಂಗದಂತೆ ಮಾಡಿತು.
18 : 62
فَلَمَّا جَاوَزَا قَالَ لِفَتَىٰهُ ءَاتِنَا غَدَآءَنَا لَقَدْ لَقِينَا مِن سَفَرِنَا هَـٰذَا نَصَبًا
ಅವರು ಆ ಸ್ಥಳದಿಂದ ಮುಂದೆ ಸಾಗಿದಾಗ ಮೂಸಾ ತನ್ನ ಸೇವಕನೊಡನೆ ಹೇಳಿದರು: “ನಮ್ಮ ಉಪಹಾರವನ್ನು ತೆಗೆದುಕೊಂಡು ಬಾ. ನಮ್ಮ ಈ ಪ್ರಯಾಣದಿಂದ ನಮಗೆ ಬಹಳ ಸುಸ್ತಾಗಿದೆ.”
18 : 63
قَالَ أَرَءَيْتَ إِذْ أَوَيْنَآ إِلَى ٱلصَّخْرَةِ فَإِنِّى نَسِيتُ ٱلْحُوتَ وَمَآ أَنسَىٰنِيهُ إِلَّا ٱلشَّيْطَـٰنُ أَنْ أَذْكُرَهُۥ ۚ وَٱتَّخَذَ سَبِيلَهُۥ فِى ٱلْبَحْرِ عَجَبًا
ಸೇವಕ ಹೇಳಿದನು: “ನಿಮಗೆ ಗೊತ್ತೇ? ನಾವು ಆ ಬಂಡೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಾನು ಆ ಮೀನನ್ನು ಮರೆತೇ ಬಿಟ್ಟಿದ್ದೆ. ನಾನು ಅದರ ಬಗ್ಗೆ ಮಾತನಾಡಬಾರದೆಂದು ಶೈತಾನನೇ ನನಗೆ ಅದನ್ನು ಮರೆಯುವಂತೆ ಮಾಡಿದ್ದನು. ಅದು ಸಮುದ್ರದಲ್ಲಿ ತಾನು ಸಾಗಿದ ಹಾದಿಯನ್ನು ಒಂದು ವಿಚಿತ್ರವನ್ನಾಗಿ ಮಾಡಿತ್ತು.”
18 : 64
قَالَ ذَٰلِكَ مَا كُنَّا نَبْغِ ۚ فَٱرْتَدَّا عَلَىٰٓ ءَاثَارِهِمَا قَصَصًا
ಮೂಸಾ ಹೇಳಿದರು: “ನಾವು ಹುಡುಕುತ್ತಿದ್ದದ್ದು ಅದನ್ನೇ!” ತಕ್ಷಣ ಅವರಿಬ್ಬರೂ ತಮ್ಮ ಹೆಜ್ಜೆಗಳನ್ನು ಹಿಂಬಾಲಿಸುತ್ತಾ ಮರಳಿದರು.
18 : 65
فَوَجَدَا عَبْدًا مِّنْ عِبَادِنَآ ءَاتَيْنَـٰهُ رَحْمَةً مِّنْ عِندِنَا وَعَلَّمْنَـٰهُ مِن لَّدُنَّا عِلْمًا
ಅಲ್ಲಿ ಅವರು ನಮ್ಮ ದಾಸರಲ್ಲಿ ಒಬ್ಬರನ್ನು ಕಂಡರು. ಅವರಿಗೆ ನಾವು ನಮ್ಮ ಕಡೆಯ ದಯೆಯನ್ನು ನೀಡಿದ್ದೆವು. ಅವರಿಗೆ ನಮ್ಮ ಕಡೆಯ ಜ್ಞಾನವನ್ನೂ ಕಲಿಸಿದ್ದೆವು.
18 : 66
قَالَ لَهُۥ مُوسَىٰ هَلْ أَتَّبِعُكَ عَلَىٰٓ أَن تُعَلِّمَنِ مِمَّا عُلِّمْتَ رُشْدًا
ಮೂಸಾ ಅವರೊಡನೆ ಕೇಳಿದರು: “ನಾನು ತಮ್ಮನ್ನು ಹಿಂಬಾಲಿಸಿದರೆ ತಮಗೆ ಕಲಿಸಿಕೊಡಲಾದ ಸುಜ್ಞಾನದಿಂದ ತಾವು ನನಗೆ ಸ್ವಲ್ಪ ಕಲಿಸಿಕೊಡುವಿರಾ?”
18 : 67
قَالَ إِنَّكَ لَن تَسْتَطِيعَ مَعِىَ صَبْرًا
ಆ ವ್ಯಕ್ತಿ ಹೇಳಿದರು: “ನನ್ನ ಜೊತೆ ತಾಳ್ಮೆಯಿಂದಿರಲು ನಿಮಗೆ ಖಂಡಿತ ಸಾಧ್ಯವಿಲ್ಲ.
18 : 68
وَكَيْفَ تَصْبِرُ عَلَىٰ مَا لَمْ تُحِطْ بِهِۦ خُبْرًا
ನಿಮಗೆ ಸೂಕ್ಷ್ಮವಾಗಿ ತಿಳಿಯಲು ಸಾಧ್ಯವಿಲ್ಲದ ವಿಷಯದಲ್ಲಿ ನೀವು ತಾಳ್ಮೆಯಿಂದಿರುವುದಾದರೂ ಹೇಗೆ?”
18 : 69
قَالَ سَتَجِدُنِىٓ إِن شَآءَ ٱللَّهُ صَابِرًا وَلَآ أَعْصِى لَكَ أَمْرًا
ಮೂಸಾ ಹೇಳಿದರು: “ಅಲ್ಲಾಹು ಬಯಸಿದರೆ ತಾವು ನನ್ನನ್ನು ತಾಳ್ಮೆಯುಳ್ಳವನಾಗಿ ಕಾಣುವಿರಿ. ತಮ್ಮ ಯಾವುದೇ ಆಜ್ಞೆಯನ್ನು ನಾನು ಉಲ್ಲಂಘಿಸುವುದಿಲ್ಲ.”
18 : 70
قَالَ فَإِنِ ٱتَّبَعْتَنِى فَلَا تَسْـَٔلْنِى عَن شَىْءٍ حَتَّىٰٓ أُحْدِثَ لَكَ مِنْهُ ذِكْرًا
ಆ ವ್ಯಕ್ತಿ ಹೇಳಿದರು: “ನೀವು ನನ್ನನ್ನು ಹಿಂಬಾಲಿಸುವುದಾದರೆ ಯಾವುದೇ ವಿಷಯದ ಬಗ್ಗೆಯೂ ನನ್ನೊಡನೆ ಪ್ರಶ್ನಿಸಬಾರದು. ನಾನು ಅದರ ಬಗ್ಗೆ ನಿಮಗೆ ಮಾಹಿತಿ ನೀಡುವ ತನಕ.”
18 : 71
فَٱنطَلَقَا حَتَّىٰٓ إِذَا رَكِبَا فِى ٱلسَّفِينَةِ خَرَقَهَا ۖ قَالَ أَخَرَقْتَهَا لِتُغْرِقَ أَهْلَهَا لَقَدْ جِئْتَ شَيْـًٔا إِمْرًا
ಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರಿಬ್ಬರು ಒಂದು ನಾವೆಯನ್ನೇರಿದಾಗ ಆ ವ್ಯಕ್ತಿ ನಾವೆಯ ಹಲಗೆಯನ್ನು ಒಡೆದು ತೂತು ಮಾಡಿದರು. ಮೂಸಾ ಹೇಳಿದರು: “ಏನಿದು? ಅದರಲ್ಲಿರುವ ಜನರನ್ನು ಮುಳುಗಿಸಿ ಬಿಡಲು ತೂತು ಮಾಡುತ್ತಿದ್ದೀರಾ? ನಿಜಕ್ಕೂ ನೀವು ಒಂದು ಘೋರ ಕೆಲಸವನ್ನು ಮಾಡಿದ್ದೀರಿ!”
18 : 72
قَالَ أَلَمْ أَقُلْ إِنَّكَ لَن تَسْتَطِيعَ مَعِىَ صَبْرًا
ಆ ವ್ಯಕ್ತಿ ಹೇಳಿದರು: “ನಾನು ಹೇಳಿರಲಿಲ್ಲವೇ? ನನ್ನ ಜೊತೆ ತಾಳ್ಮೆಯಿಂದಿರಲು ನಿಮಗೆ ಸಾಧ್ಯವಿಲ್ಲವೆಂದು!”
18 : 73
قَالَ لَا تُؤَاخِذْنِى بِمَا نَسِيتُ وَلَا تُرْهِقْنِى مِنْ أَمْرِى عُسْرًا
ಮೂಸಾ ಹೇಳಿದರು: “ನಾನು ಅದನ್ನು ಮರೆತುಬಿಟ್ಟದ್ದಕ್ಕಾಗಿ ನನ್ನನ್ನು ಶಿಕ್ಷಿಸಬೇಡಿ. ನನಗೆ ಕಷ್ಟವಾಗಿರುವ ವಿಷಯವನ್ನು ನನ್ನ ಮೇಲೆ ಹೇರಬೇಡಿ.”
18 : 74
فَٱنطَلَقَا حَتَّىٰٓ إِذَا لَقِيَا غُلَـٰمًا فَقَتَلَهُۥ قَالَ أَقَتَلْتَ نَفْسًا زَكِيَّةًۢ بِغَيْرِ نَفْسٍ لَّقَدْ جِئْتَ شَيْـًٔا نُّكْرًا
ಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರೊಬ್ಬ ಹುಡುಗನನ್ನು ಭೇಟಿಯಾದಾಗ, ಆ ವ್ಯಕ್ತಿ ಆ ಹುಡುಗನನ್ನು ಕೊಂದರು. ಮೂಸಾ ಹೇಳಿದರು: “ಯಾರನ್ನೂ ಕೊಲೆ ಮಾಡದ ಒಂದು ಪರಿಶುದ್ಧ ಜೀವವನ್ನು ನೀವು ಕೊಂದುಬಿಟ್ಟಿರಿ. ನಿಜಕ್ಕೂ ನೀವು ಬಹಳ ಶೋಚನೀಯ ಕೆಲಸವನ್ನು ಮಾಡಿದ್ದೀರಿ.”
18 : 75
۞ قَالَ أَلَمْ أَقُل لَّكَ إِنَّكَ لَن تَسْتَطِيعَ مَعِىَ صَبْرًا
ಆ ವ್ಯಕ್ತಿ ಹೇಳಿದರು: “ನಾನು ಹೇಳಿರಲಿಲ್ಲವೇ? ನನ್ನ ಜೊತೆ ತಾಳ್ಮೆಯಿಂದಿರಲು ನಿಮಗೆ ಸಾಧ್ಯವಿಲ್ಲವೆಂದು!”
18 : 76
قَالَ إِن سَأَلْتُكَ عَن شَىْءٍۭ بَعْدَهَا فَلَا تُصَـٰحِبْنِى ۖ قَدْ بَلَغْتَ مِن لَّدُنِّى عُذْرًا
ಮೂಸಾ ಹೇಳಿದರು: “ಇನ್ನು ಮುಂದಕ್ಕೆ ನಾನು ನಿಮ್ಮಲ್ಲಿ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನಿಸಿದರೆ, ನೀವು ನನ್ನನ್ನು ಬಿಟ್ಟು ಹೋಗಬಹುದು. ನನ್ನ ಕಡೆಯಿಂದ ನಿಮಗಂತೂ ಒಂದು ನೆವನ ಸಿಕ್ಕಿಬಿಟ್ಟಿದೆ.”
18 : 77
فَٱنطَلَقَا حَتَّىٰٓ إِذَآ أَتَيَآ أَهْلَ قَرْيَةٍ ٱسْتَطْعَمَآ أَهْلَهَا فَأَبَوْا۟ أَن يُضَيِّفُوهُمَا فَوَجَدَا فِيهَا جِدَارًا يُرِيدُ أَن يَنقَضَّ فَأَقَامَهُۥ ۖ قَالَ لَوْ شِئْتَ لَتَّخَذْتَ عَلَيْهِ أَجْرًا
ಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರು ಒಂದು ಊರನ್ನು ತಲುಪಿದಾಗ, ಅದರ ನಿವಾಸಿಗಳೊಡನೆ ಆಹಾರ ಕೇಳಿದರು. ಆದರೆ ಅವರು ಆತಿಥ್ಯ ನೀಡಲು ನಿರಾಕರಿಸಿದರು. ಆಗ ಅವರು ಅಲ್ಲಿ ಕುಸಿದು ಬೀಳುವಂತಾಗಿರುವ ಒಂದು ಗೋಡೆಯನ್ನು ಕಂಡರು. ತಕ್ಷಣ ಆ ವ್ಯಕ್ತಿ ಅದನ್ನು ದುರಸ್ತಿಗೊಳಿಸಿ ನಿಲ್ಲಿಸಿದರು. ಮೂಸಾ ಹೇಳಿದರು: “ನೀವು ಬಯಸಿದರೆ ಈ ಕೆಲಸ ಮಾಡಿದ್ದಕ್ಕಾಗಿ ಅವರಿಂದ ವೇತನ ಪಡೆಯಬಹುದಿತ್ತು.”
18 : 78
قَالَ هَـٰذَا فِرَاقُ بَيْنِى وَبَيْنِكَ ۚ سَأُنَبِّئُكَ بِتَأْوِيلِ مَا لَمْ تَسْتَطِع عَّلَيْهِ صَبْرًا
ಆ ವ್ಯಕ್ತಿ ಹೇಳಿದರು: “ಇದು ನಮ್ಮ ನಡುವಿನ ಅಗಲಿಕೆಯಾಗಿದೆ. ಯಾವುದರ ಬಗ್ಗೆ ತಾಳ್ಮೆಯಿಂದಿರಲು ನಿಮಗೆ ಸಾಧ್ಯವಾಗಲಿಲ್ಲವೋ ಅದರ ಮರ್ಮವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.
18 : 79
أَمَّا ٱلسَّفِينَةُ فَكَانَتْ لِمَسَـٰكِينَ يَعْمَلُونَ فِى ٱلْبَحْرِ فَأَرَدتُّ أَنْ أَعِيبَهَا وَكَانَ وَرَآءَهُم مَّلِكٌ يَأْخُذُ كُلَّ سَفِينَةٍ غَصْبًا
ಆ ನಾವೆಯು ಕಡಲಲ್ಲಿ ಕೆಲಸ ಮಾಡುವ ಕೆಲವು ಬಡವರದ್ದಾಗಿತ್ತು. ಆದ್ದರಿಂದ ನಾನು ಅದನ್ನು ಹಾಳುಮಾಡಲು ಬಯಸಿದೆನು. ಏಕೆಂದರೆ, ಅವರ ಹಿಂಭಾಗದಲ್ಲಿ ಒಬ್ಬ ಅರಸನಿದ್ದನು ಮತ್ತು ಅವನು ಎಲ್ಲಾ (ಉತ್ತಮ) ನಾವೆಗಳನ್ನು ಬಲವಂತದಿಂದ ವಶಪಡಿಸಿಕೊಳ್ಳುತ್ತಿದ್ದನು.
18 : 80
وَأَمَّا ٱلْغُلَـٰمُ فَكَانَ أَبَوَاهُ مُؤْمِنَيْنِ فَخَشِينَآ أَن يُرْهِقَهُمَا طُغْيَـٰنًا وَكُفْرًا
ಆ ಹುಡುಗನ ಮಾತಾಪಿತರು ಸತ್ಯವಿಶ್ವಾಸಿಗಳಾಗಿದ್ದರು. ಅವನು (ದೊಡ್ಡವನಾಗಿ) ಅವರನ್ನು ಅತಿರೇಕ ಮತ್ತು ಸತ್ಯ ನಿಷೇಧಕ್ಕೆ ನಿರ್ಬಂಧಿಸಬಹುದೆಂದು ನಮಗೆ ಭಯವಾಯಿತು.
18 : 81
فَأَرَدْنَآ أَن يُبْدِلَهُمَا رَبُّهُمَا خَيْرًا مِّنْهُ زَكَوٰةً وَأَقْرَبَ رُحْمًا
ಆದ್ದರಿಂದ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಅವನಿಗಿಂತಲೂ ಹೆಚ್ಚು ಪರಿಶುದ್ಧನಾದ ಮತ್ತು ಅವನಿಗಿಂತಲೂ ಹೆಚ್ಚು ಪ್ರೀತಿ-ವಾತ್ಸಲ್ಯವಿರುವ ಒಬ್ಬ ಮಗನನ್ನು ಬದಲಿಯಾಗಿ ನೀಡಲಿ ಎಂದು ನಾವು ಬಯಸಿದೆವು.
18 : 82
وَأَمَّا ٱلْجِدَارُ فَكَانَ لِغُلَـٰمَيْنِ يَتِيمَيْنِ فِى ٱلْمَدِينَةِ وَكَانَ تَحْتَهُۥ كَنزٌ لَّهُمَا وَكَانَ أَبُوهُمَا صَـٰلِحًا فَأَرَادَ رَبُّكَ أَن يَبْلُغَآ أَشُدَّهُمَا وَيَسْتَخْرِجَا كَنزَهُمَا رَحْمَةً مِّن رَّبِّكَ ۚ وَمَا فَعَلْتُهُۥ عَنْ أَمْرِى ۚ ذَٰلِكَ تَأْوِيلُ مَا لَمْ تَسْطِع عَّلَيْهِ صَبْرًا
ಆ ಗೋಡೆಯು ಊರಿನ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು. ಅದರ ಅಡಿಯಲ್ಲಿ ಅವರಿಗೆ ಸಿಗಬೇಕಾದ ಒಂದು ನಿಧಿಯಿತ್ತು. ಅವರ ತಂದೆ ನೀತಿವಂತನಾಗಿದ್ದ. ಆದ್ದರಿಂದ ಅವರಿಬ್ಬರೂ ಪ್ರೌಢಾವಸ್ಥೆಯನ್ನು ತಲುಪಿದ ನಂತರ ತಮ್ಮ ನಿಧಿಯನ್ನು ಹೊರತೆಗೆಯಬೇಕೆಂದು ನಿಮ್ಮ ಪರಿಪಾಲಕ (ಅಲ್ಲಾಹು) ಬಯಸಿದ್ದನು. ಇದು ನಮ್ಮ ಪರಿಪಾಲಕನ (ಅಲ್ಲಾಹನ) ದಯೆಯಾಗಿದೆ. ನಾನು ಇವೆಲ್ಲವನ್ನೂ ನನ್ನ ಇಷ್ಟದಂತೆ ಮಾಡಿರಲಿಲ್ಲ. ಯಾವುದರ ಬಗ್ಗೆ ನಿಮಗೆ ತಾಳ್ಮೆಯಿಂದಿರಲು ಸಾಧ್ಯವಾಗಲಿಲ್ಲವೋ ಅದರ ಮರ್ಮವು ಇದೇ.”
18 : 83
وَيَسْـَٔلُونَكَ عَن ذِى ٱلْقَرْنَيْنِ ۖ قُلْ سَأَتْلُوا۟ عَلَيْكُم مِّنْهُ ذِكْرًا
(ಪ್ರವಾದಿಯವರೇ) ಅವರು ನಿಮ್ಮಲ್ಲಿ ದುಲ್-ಕರ್ನೈನರ ಬಗ್ಗೆ ಕೇಳುತ್ತಾರೆ. ಹೇಳಿರಿ: “ಅವರ ಬಗ್ಗೆ ನಾನು ನಿಮಗೆ ಸ್ವಲ್ಪ ಓದಿ ಕೊಡುತ್ತೇನೆ.”
18 : 84
إِنَّا مَكَّنَّا لَهُۥ فِى ٱلْأَرْضِ وَءَاتَيْنَـٰهُ مِن كُلِّ شَىْءٍ سَبَبًا
ನಾವು ಅವರಿಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದ್ದೆವು ಮತ್ತು ಅವರಿಗೆ ಬೇಕಾದ ಎಲ್ಲಾ ಸಾಧನಾನುಕೂಲತೆಗಳನ್ನು ನೀಡಿದ್ದೆವು.
18 : 85
فَأَتْبَعَ سَبَبًا
ಅವರು ಒಂದು ಮಾರ್ಗವನ್ನು ಹಿಂಬಾಲಿಸಿ ಹೋದರು.
18 : 86
حَتَّىٰٓ إِذَا بَلَغَ مَغْرِبَ ٱلشَّمْسِ وَجَدَهَا تَغْرُبُ فِى عَيْنٍ حَمِئَةٍ وَوَجَدَ عِندَهَا قَوْمًا ۗ قُلْنَا يَـٰذَا ٱلْقَرْنَيْنِ إِمَّآ أَن تُعَذِّبَ وَإِمَّآ أَن تَتَّخِذَ فِيهِمْ حُسْنًا
ಎಲ್ಲಿಯವರೆಗೆಂದರೆ, ಅವರು ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಕೆಸರು ನೀರಿನ ತೊರೆಯಲ್ಲಿ ಅಸ್ತಮಿಸುವುದನ್ನು ಕಂಡರು. ಆ ತೊರೆಯ ಬಳಿ ಜನರನ್ನೂ ಕಂಡರು. ನಾವು ಹೇಳಿದೆವು: “ಓ ದುಲ್-ಕರ್ನೈನ್! ಒಂದೋ ಇವರನ್ನು ಶಿಕ್ಷಿಸಿ ಅಥವಾ ಅವರ ಬಗ್ಗೆ ಉತ್ತಮ ಸಮೀಪನವನ್ನು ಸ್ವೀಕರಿಸಿ.”
18 : 87
قَالَ أَمَّا مَن ظَلَمَ فَسَوْفَ نُعَذِّبُهُۥ ثُمَّ يُرَدُّ إِلَىٰ رَبِّهِۦ فَيُعَذِّبُهُۥ عَذَابًا نُّكْرًا
ಅವರು ಹೇಳಿದರು: “ಯಾರು ಅಕ್ರಮವೆಸಗುತ್ತಾನೋ ಅವನನ್ನು ನಾವು ಶಿಕ್ಷಿಸುತ್ತೇವೆ. ನಂತರ ಅವನನ್ನು ಅವನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುತ್ತದೆ. ಆಗ ಅವನು ಅವನಿಗೆ ಕಠೋರ ಶಿಕ್ಷೆಯನ್ನು ನೀಡುತ್ತಾನೆ.
18 : 88
وَأَمَّا مَنْ ءَامَنَ وَعَمِلَ صَـٰلِحًا فَلَهُۥ جَزَآءً ٱلْحُسْنَىٰ ۖ وَسَنَقُولُ لَهُۥ مِنْ أَمْرِنَا يُسْرًا
ಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾನೋ ಅವನಿಗೆ ಅತ್ಯುತ್ತಮ ಪ್ರತಿಫಲವು ದೊರೆಯುತ್ತದೆ. ನಾವು ಅವನಿಗೆ ನಮ್ಮ ಕೆಲಸಗಳಲ್ಲಿ ಸುಲಭವಾಗಿರುವುದನ್ನೇ ಆದೇಶಿಸುತ್ತೇವೆ.”
18 : 89
ثُمَّ أَتْبَعَ سَبَبًا
ನಂತರ ಅವರು ಇನ್ನೊಂದು ಮಾರ್ಗವನ್ನು ಹಿಂಬಾಲಿಸಿ ಹೋದರು.
18 : 90
حَتَّىٰٓ إِذَا بَلَغَ مَطْلِعَ ٱلشَّمْسِ وَجَدَهَا تَطْلُعُ عَلَىٰ قَوْمٍ لَّمْ نَجْعَل لَّهُم مِّن دُونِهَا سِتْرًا
ಎಲ್ಲಿಯವರೆಗೆಂದರೆ, ಅವರು ಸೂರ್ಯೋದಯದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಜನರ ಮೇಲೆ ಉದಯವಾಗುತ್ತಿರುವಂತೆ ಕಂಡರು. ಅದರಿಂದ ಮರೆಯಾಗಲು ನಾವು ಅವರಿಗೆ ಯಾವುದೇ ಪರದೆಯನ್ನು ಮಾಡಿಕೊಟ್ಟಿರಲಿಲ್ಲ.
18 : 91
كَذَٰلِكَ وَقَدْ أَحَطْنَا بِمَا لَدَيْهِ خُبْرًا
ವಿಷಯವು ಈ ರೀತಿಯಾಗಿದೆ. ನಾವು ಅವರ ಬಗೆಗಿನ ಎಲ್ಲಾ ಸಮಾಚಾರಗಳನ್ನು ಆವರಿಸಿಕೊಂಡಿದ್ದೆವು.
18 : 92
ثُمَّ أَتْبَعَ سَبَبًا
ನಂತರ ಅವರು ಇನ್ನೊಂದು ಮಾರ್ಗವನ್ನು ಹಿಂಬಾಲಿಸಿ ಹೋದರು.
18 : 93
حَتَّىٰٓ إِذَا بَلَغَ بَيْنَ ٱلسَّدَّيْنِ وَجَدَ مِن دُونِهِمَا قَوْمًا لَّا يَكَادُونَ يَفْقَهُونَ قَوْلًا
ಎಲ್ಲಿಯವರೆಗೆಂದರೆ, ಅವರು ಎರಡು ಬೆಟ್ಟಗಳ ನಡುವೆ ತಲುಪಿದಾಗ, ಅವುಗಳ ಈಚೆ ಬದಿಯಲ್ಲಿ ಒಂದು ಜನತೆಯನ್ನು ಕಂಡರು. ಅವರಿಗೆ ಮಾತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
18 : 94
قَالُوا۟ يَـٰذَا ٱلْقَرْنَيْنِ إِنَّ يَأْجُوجَ وَمَأْجُوجَ مُفْسِدُونَ فِى ٱلْأَرْضِ فَهَلْ نَجْعَلُ لَكَ خَرْجًا عَلَىٰٓ أَن تَجْعَلَ بَيْنَنَا وَبَيْنَهُمْ سَدًّا
ಅವರು ಹೇಳಿದರು: “ಓ ದುಲ್-ಕರ್ನೈನ್! ನಿಶ್ಚಯವಾಗಿಯೂ ಯಾ‌ಜೂಜ್-ಮಾ‌ಜೂಜರು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಿದ್ದಾರೆ. ನಾವು ನಿಮಗೆ ಒಂದು ಖರ್ಚನ್ನು ನಿಗದಿಪಡಿಸಿದರೆ, ನೀವು ನಮ್ಮ ಮತ್ತು ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸಿಕೊಡುವಿರಾ?
18 : 95
قَالَ مَا مَكَّنِّى فِيهِ رَبِّى خَيْرٌ فَأَعِينُونِى بِقُوَّةٍ أَجْعَلْ بَيْنَكُمْ وَبَيْنَهُمْ رَدْمًا
ದುಲ್-ಕರ್ನೈನ್ ಹೇಳಿದರು: “ನನ್ನ ಪರಿಪಾಲಕನು (ಅಲ್ಲಾಹು) ಏನೆಲ್ಲಾ ನನ್ನ ಅಧಿಕಾರಕ್ಕೆ ನೀಡಿದ್ದಾನೋ ಅದು ಅತ್ಯುತ್ತಮವಾಗಿದೆ. ನೀವು ನಿಮ್ಮ ದೇಹಬಲದಿಂದ ನನಗೆ ಸಹಾಯ ಮಾಡಿರಿ. ನಿಮ್ಮ ಮತ್ತು ಅವರ ನಡುವೆ ನಾನು ಒಂದು ಬಲಿಷ್ಠ ಗೋಡೆಯನ್ನು ನಿರ್ಮಿಸಿಕೊಡುತ್ತೇನೆ.”
18 : 96
ءَاتُونِى زُبَرَ ٱلْحَدِيدِ ۖ حَتَّىٰٓ إِذَا سَاوَىٰ بَيْنَ ٱلصَّدَفَيْنِ قَالَ ٱنفُخُوا۟ ۖ حَتَّىٰٓ إِذَا جَعَلَهُۥ نَارًا قَالَ ءَاتُونِىٓ أُفْرِغْ عَلَيْهِ قِطْرًا
(ನಂತರ ಅವರು ಹೇಳಿದರು): “ನನಗೆ ಕಬ್ಬಿಣದ ತುಂಡುಗಳನ್ನು ತಂದುಕೊಡಿ.” ಎಲ್ಲಿಯವರೆಗೆಂದರೆ, ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮಗೊಳಿಸಿದಾಗ, ಅವರು ಹೇಳಿದರು: “ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡಿರಿ.” ಎಲ್ಲಿಯವರೆಗೆಂದರೆ, ಆ ಕಬ್ಬಿಣದ ತುಂಡುಗಳು ಸಂಪೂರ್ಣ ಕೆಂಡದಂತಾದಾಗ, ಅವರು ಹೇಳಿದರು: “ನನಗೆ ಕರಗಿಸಿದ ತಾಮ್ರವನ್ನು ತಂದು ಕೊಡಿ. ನಾನು ಅದನ್ನು ಅದಕ್ಕೆ ಸುರಿಯುತ್ತೇನೆ.”
18 : 97
فَمَا ٱسْطَـٰعُوٓا۟ أَن يَظْهَرُوهُ وَمَا ٱسْتَطَـٰعُوا۟ لَهُۥ نَقْبًا
ನಂತರ ಆ ಗೋಡೆಯನ್ನು ಏರಿ ಬರಲು ಅವರಿಗೆ (ಯಾ‌ಜೂಜ್-ಮಾ‌ಜೂಜರಿಗೆ) ಸಾಧ್ಯವಾಗಲಿಲ್ಲ. ಅದಕ್ಕೆ ಕನ್ನ ಕೊರೆಯಲೂ ಅವರಿಗೆ ಸಾಧ್ಯವಾಗಲಿಲ್ಲ.
18 : 98
قَالَ هَـٰذَا رَحْمَةٌ مِّن رَّبِّى ۖ فَإِذَا جَآءَ وَعْدُ رَبِّى جَعَلَهُۥ دَكَّآءَ ۖ وَكَانَ وَعْدُ رَبِّى حَقًّا
ದುಲ್-ಕರ್ನೈನ್ ಹೇಳಿದರು: “ಇದು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ದಯೆಯಾಗಿದೆ. ನನ್ನ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಬಂದರೆ ಅವನು ಅದನ್ನು ನುಚ್ಚುನೂರು ಮಾಡುವನು. ನನ್ನ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಸತ್ಯವಾಗಿದೆ.”
18 : 99
۞ وَتَرَكْنَا بَعْضَهُمْ يَوْمَئِذٍ يَمُوجُ فِى بَعْضٍ ۖ وَنُفِخَ فِى ٱلصُّورِ فَجَمَعْنَـٰهُمْ جَمْعًا
(ಅಂದು) ಅವರು ಪರಸ್ಪರ ಉಕ್ಕೇರುವಂತೆ ಅವರನ್ನು ಬಿಟ್ಟುಬಿಡುವೆವು. ಕಹಳೆಯಲ್ಲಿ ಊದಲಾಗುವುದು. ಆಗ ನಾವು ಅವರೆಲ್ಲರನ್ನೂ ಒಟ್ಟಾಗಿ ಸೇರಿಸುವೆವು.
18 : 100
وَعَرَضْنَا جَهَنَّمَ يَوْمَئِذٍ لِّلْكَـٰفِرِينَ عَرْضًا
ಅಂದು ನಾವು ಸತ್ಯನಿಷೇಧಿಗಳಿಗೆ ನರಕವನ್ನು ನೇರವಾಗಿ ತೋರಿಸುವೆವು.
18 : 101
ٱلَّذِينَ كَانَتْ أَعْيُنُهُمْ فِى غِطَآءٍ عَن ذِكْرِى وَكَانُوا۟ لَا يَسْتَطِيعُونَ سَمْعًا
ಅವರು ಯಾರೆಂದರೆ, ಅವರ ಕಣ್ಣುಗಳಿಗೆ ನನ್ನ ನೆನಪು ಬರದಂತೆ ಪರದೆ ಹಾಕಲಾದವರು. ಸತ್ಯಕ್ಕೆ ಕಿವಿಗೊಡಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
18 : 102
أَفَحَسِبَ ٱلَّذِينَ كَفَرُوٓا۟ أَن يَتَّخِذُوا۟ عِبَادِى مِن دُونِىٓ أَوْلِيَآءَ ۚ إِنَّآ أَعْتَدْنَا جَهَنَّمَ لِلْكَـٰفِرِينَ نُزُلًا
ನನ್ನನ್ನು ಬಿಟ್ಟು ನನ್ನ ದಾಸರನ್ನು ರಕ್ಷಕರನ್ನಾಗಿ ಸ್ವೀಕರಿಸಬಹುದೆಂದು ಸತ್ಯನಿಷೇಧಿಗಳು ಭಾವಿಸಿದ್ದಾರೆಯೇ? ನಿಶ್ಚಯವಾಗಿಯೂ ನಾವು ಸತ್ಯನಿಷೇಧಿಗಳಿಗೆ ಆತಿಥ್ಯವಾಗಿ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ.
18 : 103
قُلْ هَلْ نُنَبِّئُكُم بِٱلْأَخْسَرِينَ أَعْمَـٰلًا
(ಪ್ರವಾದಿಯವರೇ) ಕೇಳಿರಿ: “ಕರ್ಮಗಳ ವಿಷಯದಲ್ಲಿ ಅತಿ ಹೆಚ್ಚು ನಷ್ಟದಲ್ಲಿರುವವರು ಯಾರೆಂದು ನಾವು ನಿಮಗೆ ತಿಳಿಸಿಕೊಡಲೇ?
18 : 104
ٱلَّذِينَ ضَلَّ سَعْيُهُمْ فِى ٱلْحَيَوٰةِ ٱلدُّنْيَا وَهُمْ يَحْسَبُونَ أَنَّهُمْ يُحْسِنُونَ صُنْعًا
ಅವರು ಯಾರೆಂದರೆ, ಇಹಲೋಕ ಜೀವನದಲ್ಲಿ ತಮ್ಮ ಪರಿಶ್ರಮಗಳನ್ನು ವ್ಯರ್ಥಗೊಳಿಸಿದವರು. ಅವರು ತಾವು ಅತ್ಯುತ್ತಮ ಕರ್ಮಗಳನ್ನು ಮಾಡುತ್ತಿದ್ದೇವೆಂಬ ಭಾವನೆಯಲ್ಲಿದ್ದಾರೆ.”
18 : 105
أُو۟لَـٰٓئِكَ ٱلَّذِينَ كَفَرُوا۟ بِـَٔايَـٰتِ رَبِّهِمْ وَلِقَآئِهِۦ فَحَبِطَتْ أَعْمَـٰلُهُمْ فَلَا نُقِيمُ لَهُمْ يَوْمَ ٱلْقِيَـٰمَةِ وَزْنًا
ಅವರೇ ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಮತ್ತು ಅವನನ್ನು ಭೇಟಿಯಾಗುವುದನ್ನು ನಿಷೇಧಿಸಿದವರು. ಆದ್ದರಿಂದ ಅವರ ಕರ್ಮಗಳು ವ್ಯರ್ಥವಾದವು. ಪುನರುತ್ಥಾನ ದಿನದಂದು ನಾವು ಅವರಿಗೆ ಯಾವುದೇ ತೂಕವನ್ನು (ಪ್ರಾಮುಖ್ಯತೆಯನ್ನು) ನೀಡುವುದಿಲ್ಲ.
18 : 106
ذَٰلِكَ جَزَآؤُهُمْ جَهَنَّمُ بِمَا كَفَرُوا۟ وَٱتَّخَذُوٓا۟ ءَايَـٰتِى وَرُسُلِى هُزُوًا
ಅದೇ ಅವರ ಸ್ಥಿತಿ! ಅವರು ನಿಷೇಧಿಸಿದ ಕಾರಣ ಮತ್ತು ನನ್ನ ವಚನಗಳನ್ನು ಹಾಗೂ ನನ್ನ ಸಂದೇಶವಾಹಕರುಗಳನ್ನು ತಮಾಷೆಯಾಗಿ ಸ್ವೀಕರಿಸಿದ ಕಾರಣ ಅವರಿಗಿರುವ ಪ್ರತಿಫಲವು ನರಕವಾಗಿದೆ.
18 : 107
إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ كَانَتْ لَهُمْ جَنَّـٰتُ ٱلْفِرْدَوْسِ نُزُلًا
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಆತಿಥ್ಯವಾಗಿ ಫಿರ್ದೌಸ್ (ಅತ್ಯುನ್ನತ) ಸ್ವರ್ಗೋದ್ಯಾನಗಳಿವೆ.
18 : 108
خَـٰلِدِينَ فِيهَا لَا يَبْغُونَ عَنْهَا حِوَلًا
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದರಿಂದ ಸ್ಥಳಾಂತರಗೊಳ್ಳಲು ಅವರು ಯಾವತ್ತೂ ಬಯಸುವುದಿಲ್ಲ.
18 : 109
قُل لَّوْ كَانَ ٱلْبَحْرُ مِدَادًا لِّكَلِمَـٰتِ رَبِّى لَنَفِدَ ٱلْبَحْرُ قَبْلَ أَن تَنفَدَ كَلِمَـٰتُ رَبِّى وَلَوْ جِئْنَا بِمِثْلِهِۦ مَدَدًا
ಹೇಳಿರಿ: “ನನ್ನ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಬರೆಯಲು ಸಮುದ್ರ ಜಲವನ್ನು ಶಾಯಿಯಾಗಿ ಬಳಸಿದರೆ, ನನ್ನ ಪರಿಪಾಲಕನ (ಅಲ್ಲಾಹನ) ವಚನಗಳು ಮುಗಿಯುವ ಮೊದಲೇ ಸಮುದ್ರದ ನೀರು ಮುಗಿಯುವುದು ನಿಶ್ಚಿತ. ನಾವು ಅದರಂತಿರುವ ಇನ್ನೊಂದನ್ನು ಸಹಾಯಕ್ಕಾಗಿ ತಂದರೂ ಸಹ.”
18 : 110
قُلْ إِنَّمَآ أَنَا۠ بَشَرٌ مِّثْلُكُمْ يُوحَىٰٓ إِلَىَّ أَنَّمَآ إِلَـٰهُكُمْ إِلَـٰهٌ وَٰحِدٌ ۖ فَمَن كَانَ يَرْجُوا۟ لِقَآءَ رَبِّهِۦ فَلْيَعْمَلْ عَمَلًا صَـٰلِحًا وَلَا يُشْرِكْ بِعِبَادَةِ رَبِّهِۦٓ أَحَدًۢا
(ಪ್ರವಾದಿಯವರೇ) ಹೇಳಿರಿ: “ನಾನು ನಿಮ್ಮಂತಹ ಒಬ್ಬ ಮನುಷ್ಯ ಮಾತ್ರವಾಗಿದ್ದೇನೆ. ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಆದ್ದರಿಂದ ಯಾರು ತನ್ನ ಪರಿಪಾಲಕನ (ಅಲ್ಲಾಹನ) ಭೇಟಿಯನ್ನು ನಿರೀಕ್ಷಿಸುತ್ತಾನೋ ಅವನು ಸತ್ಕರ್ಮಗಳನ್ನು ಮಾಡಲಿ ಮತ್ತು ತನ್ನ ಪರಿಪಾಲಕನ (ಅಲ್ಲಾಹನ) ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯಾಗಿ ಮಾಡದಿರಲಿ.”